ತಡ ರಾತ್ರಿ ಬಿಲ್‌ ಮಾಡಿಯೂ 5 ಕೋಟಿ ರೂ.ಗೂ ಅಧಿಕ ಹಣ ವಾಪಾಸ್‌..:?

ಸಾಂದರ್ಭಿಕ ಎಐ ಚಿತ್ರ
ಸಾಂದರ್ಭಿಕ ಎಐ ಚಿತ್ರ
Published on
ಕಾರವಾರ: ಭಾನುವಾರವೂ ತಡ ರಾತ್ರಿವರೆಗೆ ಕಚೇರಿ ತೆರೆದಿಟ್ಟುಕೊಂಡು ಬಿಲ್ ಪಾವತಿ ಪ್ರಕ್ರಿಯೆ ನಡೆಸಿದ ಘಟನೆ ಇಲ್ಲಿನ ಇಲ್ಲಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನಡೆದಿದೆ. ಇಷ್ಟಾದ ಬಳಿಕವೂ ನಂತರವೂ ಸುಮಾರು 5 ಕೋಟಿಗೂ ಹೆಚ್ಚಿನ ಹಣ ಸರ್ಕಾರಕ್ಕೆ ವಾಪಸಾಗಿರುವ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ಕೊನೇಯವಾರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಕುಡಿಯುವ ನೀರಿನ ಕಾಮಗಾರಿಗಳು ಹಾಗೂ ವಿಶೇಷ ಟಾಸ್ಕ್‌ ಫೋರ್ಸ್‌ ಅನುದಾನ ಬಿಡುಗಡೆ ಆಗಿತ್ತು. ಇದರಿಂದ ಮಾರ್ಚ್ 24 ರಿಂದ 29 ರವರೆಗೆ ರಾತ್ರಿ 10 ಗಂಟೆಯವರೆಗೂ ಸರ್ಕಾರಿ ರಜಾ ದಿನಗಳಲ್ಲೂ ಬಿಲ್ ಮಾಡುವ ಪ್ರಕ್ರಿಯೆ ನಡೆಸಲಾಗಿದೆ.
ಒಟ್ಟು 34 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ 367 ಬಿಲ್‌ಗಳು ಹಾಗೂ 6 ಕೋಟಿ ರೂ. ವಿಶೇಷ ಟಾಸ್ಕ್ ಫೋರ್ಸ್ನ 450 ಬಿಲ್‌ಗಳು ಬಾಕಿ ಇದ್ದವು. ಮಾರ್ಚ್ 29 ಕ್ಕೆ ಆರ್ಥಿಕ ವರ್ಷವನ್ನು ಖಜಾನೆಯಲ್ಲಿ ಕೊನೆಗೊಳಿಸಲಾಗಿದ್ದು, ಕೊನೆ ಘಳಿಗೆಯವರೆಗೂ ಬಿಲ್ ಮಾಡಲಾಗಿದೆ. ಆದರೆ, ನಿಖರವಾಗಿ ಎಷ್ಟು ಬಿಲ್‌ಗಳು ಪಾವತಿಯಾಗಿವೆ ಎಂಬುದು ಖಚಿತವಾಗಿಲ್ಲ ಎಂದು ಅಽಕಾರಿಗಳು ತಿಳಿಸಿದ್ದಾರೆ.

ಅತ್ಯಧಿಕ ಕಾಮಗಾರಿ:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಮನೆ, ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆಯಡಿ ಒಟ್ಟು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 878 ಕೋಟಿ ರೂ. ಕಾಮಗಾರಿಗಳನ್ನು ಕೈಗೋಳ್ಳಲಾಗಿದೆ. ಅದರಲ್ಲಿ 481 ಕೋಟಿ ರೂ. ಮಾತ್ರ ಇದುವರೆಗೆ ವೆಚ್ಚವಾಗಿ ಬಿಲ್ ಪಾವತಿ ಆಗದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಬಿಲ್‌ಗಳು ಬಾಕಿ ಇವೆ ಎಂಬ ಮಾಹಿತಿ ಇದೆ.
-
"

ಎಲ್ಲ ತಾಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗ ಸೇರಿ ವಿವಿಧೆಡೆ ಕೊನೆ ಘಳಿಗೆಯಲ್ಲಿ ಬಂದರೂ ಕೆಲಸ ಮುಗಿದ ಎಲ್ಲ ಕಾಮಗಾರಿಗೆ ಬಿಲ್ ಪಾವತಿಯಾಗಿದೆ. ಆದರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕೆಲವಷ್ಟು ಬಿಲ್ ಪಾವತಿಯಾಗಿಲ್ಲ ಎಂಬ ಮಾಹಿತಿ ಇದೆ. ನಿಖರ ವರದಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಕೇಳಿದ್ದೇವೆ.

ಆನಂದ ಸಾ ಹಬೀಬ್ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net