ಬಾಡಿಗೆ ಹೊಡೆಯುವ ವೈಟ್‌ ಬೋರ್ಡ್‌ ವಾಹನಗಳ ಮೇಲೆ ಕ್ರಮ ವಹಿಸಿ ಜಿಲ್ಲಾಧಿಕಾರಿ ಆದೇಶ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು.
Published on
ಕಾರವಾರ: ಬಾಡಿಗೆ ಹೊಡೆಯುವ ಖಾಸಗಿ (ವೈಟ್‌ಬೋರ್ಡ್) ಟ್ಯಾಕ್ಸಿ ಹಾಗೂ ಬೈಕ್‌ಗಳ ವಿರುದ್ಧ ಕ್ರಮ ವಹಿಸುವಂತೆ ಜಿಲ್ಲೆಯ ಎಲ್ಲ ಆರ್‌ಟಿಒಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಕಟ್ಟುನಿಟ್ಟಿನ ಆದೇಶ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಽಕಾರದ ಸಭೆಯಲ್ಲಿ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಚಾಲಕರ ಅಹವಾಲು ಆಲಿಸಿ ಅವರು ಮಾತನಾಡಿದರು.
ಟ್ಯಾಕ್ಸಿ ಚಾಲಕರ ಯೂನಿಯನ್‌ನ ನವೀನ ನಾಯ್ಕ ಮಾತನಾಡಿ, ಭಟ್ಕಳ ತಾಲೂಕೊಂದರಲ್ಲೇ 200 ಕ್ಕೂ ಅಽಕ ವೈರ್ಟ್ ಬೋರ್ಡ್ ಗಾಡಿಗಳು ಬಾಡಿಗೆ ಹೊಡೆಯುತ್ತಿವೆ. ಈ ಬಗ್ಗೆ ದೂರು ನೀಡಿದರೂ ಆರ್‌ಟಿಒ ಅಽಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದರು. 1200 ಬೈಕ್‌ಗಳು ಬಾಡಿಗೆ ಓಡಿಸುವ ಅನುಮತಿ ಹೊಂದಿವೆ. ಆದರೆ, ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಬೈಕ್‌ಗಳಲ್ಲಿ ಬಾಡಿಗೆ ಹೊಡೆಯಲಾಗುತ್ತಿದೆ ಎಂದು ಆಕ್ಷೇಪಿಸಿದರು. ಆಟೋ ರಿಕ್ಷಾ ಯೂನಿಯನ್‌ನ ವಿಶ್ವನಾಥ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಅನುಮತಿ ಇರುವುದಕ್ಕಿಂತ ಹೆಚ್ಚು ಆಟೋ ರಿಕ್ಷಾಗಳು ಓಡಾಟ ನಡೆಸುತ್ತಿವೆ ಎಂದರು. ನಿಯಮ ಮೀರುವ ಎಲ್ಲ ವಾಹನಗಳ ಮೇಲೆ ಕ್ರಮ ವಹಿಸಲು ಜಿಲ್ಲಾಽಕಾರಿ ಸೂಚಿಸಿದರು. ಎಸ್‌ಪಿ ದೀಪನ್ ಎಂ.ಎನ್., ಅಪರ ಜಿಲ್ಲಾಽಕಾರಿ ಸಾಜೀದ್ ಮುಲ್ಲಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಮಿಸ್ಕಿನ್ ಇತರರು ವೇದಿಕೆಯಲ್ಲಿದ್ದರು.

ಸಭೆ ನಡೆಸಲು ಸೂಚನೆ

ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಯೂನಿಯನ್ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಆಟೋ ರಿಕ್ಷಾಗಳಿಗೆ 7 ಕಿಮೀ ಸಂಚಾರಕ್ಕೆ ಪರವಾನಗಿ ಇದೆ. ಗ್ರಾಮೀಣ ಭಾಗದಲ್ಲಿ 3 ಕಿಮೀ ಮಾತ್ರ ಅವಕಾಶವಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ವ್ಯಾಪ್ತಿ ಹೆಚ್ಚಿದ್ದು, ಅದನ್ನು ಉತ್ತರ ಕನ್ನಡದಲ್ಲೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ. ಈಗಾಗಲೇ ಜಿಲ್ಲೆಯಲ್ಲಿ ಆಟೋಪಗಳ ಸಂಖ್ಯೆ ದ್ವಿಗುಣವಾಗಿದೆ. ಇದರಿಂದ ಆಟೋ ರಿಕ್ಷಾಗಳ ಪರವಾನಗಿ ನೀಡುವುದನ್ನು ಸ್ಥಗಿತ ಮಾಡಬೇಕು ಎಂದರು. ಈ ಬಗ್ಗೆ ಎಲ್ಲ ತಾಲೂಕುಗಳಲ್ಲಿ ಆಯಾ ಪ್ರಾದೇಶಿ ಸಾರಿಗೆ ಅಽಕಾರಿಗಳು ಸಂಬAಧಪಟ್ಟ ಅಽಕಾರಿಗಳು, ಸಂಘಟನೆಗಳ ಸಭೆ ನಡೆಸಿ ಪ್ರಸ್ತಾವನೆ ಕಳಿಸಿದಲ್ಲಿ ಕ್ರಮ ವಹಿಸಲಾಗುವುದು ಎಂದರು.

ಪ್ಯಾನಿಕ್ ಬಟನ್ ಪ್ರಯೋಜನವಿಲ್ಲ

ಬಾಡಿಗೆ ಟ್ಯಾಕ್ಸಿಗಳಿಗೆ ಸರ್ಕಾರ ಜಾರಿಗೊಳಿಸಿರುವ ಪ್ಯಾನಿಕ್ ಬಟನ್ ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಕಂಪನಿಯಿAದ 16 ಸಾವಿರ ಕೊಟ್ಟು ಅದನ್ನು ಖರೀದಿಸಿದ್ದೇವೆ. ಪ್ರತಿ ವರ್ಷ 3500 ರೂ.ಗಳನ್ನು ನವೀಕರಣಕ್ಕೆ ಪಡೆಯಲಾಗುತ್ತಿದೆ. ಆದರೆ, ಅದಕ್ಕೆ ಅಽಕೃತವಾದ ಬಿಲ್ ನೀಡಿಲ್ಲ. ಪ್ಯಾನಿಕ್ ಬಟನ್ ಒತ್ತಿದರೆ ಎಲ್ಲಿಗೂ ಸಂದೇಶ ರವಾನೆಯಾಗುತ್ತಿಲ್ಲ ಎಂದು ಟ್ಯಾಕ್ಸಿ ಚಾಲಕರ ಯೂನಿಯನ್‌ನ ನವೀನ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಸಂಬAಧಪಟ್ಟ ಅಽಕಾರಿಗಳಿಂದ ಮಾಹಿತಿ ಪಡೆದು ಆರ್‌ಟಿಒ ಅವರು ಸಾಫ್ಟ್ವೇರ್ ಅಪ್‌ಡೇಟ್ ಮಾಡುತ್ತಿರುವ ಕಾರಣ ಸಮಸ್ಯೆಯಾಗಿದೆ ಎಂದು ತಿಳಿಸುತ್ತಿದ್ದಾರೆ. ಅದನ್ನು ಸರಿಪಡಿಸಲು ಸೂಚನೆ ನೀಡಲಾಗುವುದು ಎಂದರು.

ಗೋವಾದಲ್ಲಿ ಊರ್ಜಿತವಲ್ಲ

ರಾಜ್ಯದಲ್ಲಿ ಪಡೆಯುವ ವಾಯು ಮಾಲಿನ್ಯ ಪ್ರಮಾಣಪತ್ರ ಗೋವಾದಲ್ಲಿ ಊರ್ಜಿತವಲ್ಲ ಎಂದು ಹೇಳಲಾಗುತ್ತಿದೆ. ರಾಜ್ಯದ ಪ್ರಮಾಣಪತ್ರ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗುತ್ತಿಲ್ಲ. ಅಲ್ಲಿ ಅದಕ್ಕೆ 10 ಸಾವಿರ ರೂ. ದಂಡ ಆಕರಿಸಲಾಗುತ್ತಿದೆ ಎಂದು ಟ್ಯಾಕ್ಸಿ ಯೂನಿಯನ್ ಸದಸ್ಯರು ಆಕ್ಷೇಪಿಸಿದರು. ಈ ಬಗ್ಗೆ ಗೋವಾದ ಸಂಬAಧಪಟ್ಟ ಅಽಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net