ಬಂಡೆ ಕುಸಿದು ಶಾಲಾ ಕೊಠಡಿಗೆ ಹಾನಿ Hevy Rain

ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಘಟ್ಟದ ರಸ್ತೆಯ ಮೇಲೆ ಗುಡ್ಡ ಕುಸಿದು (Hevy Rain)ಸಂಚಾರಕ್ಕೆ ಅಡ್ಡಿಯಾಗಿತ್ತು. ಯಂತ್ರ ಬಳಸಿ ತುರ್ತಾಗಿ ಕಲ್ಲು-ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಘಟ್ಟದ ರಸ್ತೆಯ ಮೇಲೆ ಗುಡ್ಡ ಕುಸಿದು (Hevy Rain)ಸಂಚಾರಕ್ಕೆ ಅಡ್ಡಿಯಾಗಿತ್ತು. ಯಂತ್ರ ಬಳಸಿ ತುರ್ತಾಗಿ ಕಲ್ಲು-ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Published on
ಕುಮಟಾ: ಕಳೆದ 24 ಗಂಟೆಗಳಿಂದ ತಾಲೂಕಿನಾದ್ಯಂತ ಜೋರಾದ ಗಾಳಿ ಮಳೆ (Hevy Rain) ಸುರಿದು ತಂಪೆರೆದರೂ ಒಂದಷ್ಟು ಹಾನಿಯನ್ನು ಉಂಟು ಮಾಡಿದೆ.
ಪಟ್ಟಣದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ತರಗತಿ ಕೊಠಡಿಯೊಂದರ ಹಿಂಭಾಗದ ದರೆಯ ಎರಡು ದೊಡ್ಡ ಬಂಡೆಗಳು ಕಳಚಿಕೊಂಡು ಬಿದ್ದಿವೆೆ.
ನೆಲ್ಲಿಕೇರಿ ಕೆಪಿಎಸ್ ಶಾಲೆಯ ತರಗತಿ ಕೊಠಡಿಯಂಚಿನ ದರೆಯ ಬಂಡೆ ಕುಸಿದು ಬಿದ್ದಿರುವುದು.

ಬಂಡೆಗಳು ತರಗತಿಯ ಹೊರಮಾಡಿನ ಕಂಬ, ನೆಲ ಹಾಗೂ ಛಾವಣಿಗೆ ಹಾನಿಯುಂಟು ಮಾಡಿದ್ದು, ಅಲ್ಲಿದ್ದ ತ್ಯಾಜ್ಯ ಸಂಗ್ರಹಣಾ ಡಬ್ಬಿಗಳು ಅಪ್ಪಚ್ಚಿಯಾಗಿವೆ.
ದರೆಯ ಬಂಡೆಗಳು ಬೀಳುವ ಮುನ್ಸೂಚನೆ ಇದ್ದುದ್ದರಿಂದ ಅಲ್ಲಿನ ತರಗತಿಗಳಿಂದ ಮೊದಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು.
ಕೂಡಲೇ ಕಾಯಾಚರಣೆ ನಡೆಸಿ ಯಂತ್ರಗಳ ಸಹಾಯದಿಂದ ಬಂಡೆಗಳನ್ನು ತೆರವುಗೊಳಿಸಲಾಗಿದೆ.
ವಾಲಗಳ್ಳಿಯ ಹಾರೋಡಿ ಕ್ರಾಸ್ ಬಳಿ ಕುಮಟಾ-ಸಿದ್ದಾಪುರ ಹೆದ್ದಾರಿಯಲ್ಲಿ ಎಂದಿನಂತೆ ಈ ಬಾರಿಯೂ ಜೋರಾದ ಮಳೆಗೆ ಜಲಾವೃತವಾಗಿದ್ದು, ಪದೇ ಪದೆ ನೀರಿನ ಮಟ್ಟ ಅತಿಯಾಗುತ್ತ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಪಟ್ಟಣದ ಚಿತ್ರಗಿಯ ಕಲ್ಗುಡ್ಡದ ಬಯಲಿನ ನಿವಾಸಿಗಳಿಗೆ ಮಳೆನೀರು ರಸ್ತೆಯ ಮೇಲೆ ತುಂಬಿ ಹರಿದು ಕೊರಕಲುಗಳಾಗಿ ದಿನನಿತ್ಯದ ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ.
ಗುರುವಾರ ಸಾಯಂಕಾಲದಿಂದ ಎಡಬಿಡದೇ ಸುರಿದ ಮಳೆ ಶುಕ್ರವಾರ ಮಧ್ಯಾಹ್ನದ ಬಳಿಕ ಸ್ವಲ್ಪ ಬಿಡುವು ನೀಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net