ನೆಹರು ನಗರದ ಅರಣ್ಯ ಭೂಮಿಯಲ್ಲಿದ್ದ ಸ್ಮಶಾನದ ಜಾಗ ರೈಲ್ವೆ ಇಲಾಖೆಗೆ ಹೋಗಿದ್ದು, ಜನರಿಗೆ ಸಮಸ್ಯೆಯಾಗಿದೆ ಎಂದು ತುಳಸು ಗೌಡ ಗಮನ ಸೆಳೆದರು. ಶಾಸಕರು ಪ್ರತಿಕ್ರಿಯಿಸಿ, ಸ್ಥಳೀಯರಿಂದ ಅರ್ಜಿ ಪಡೆದು, ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರಿಗೆ ಸೂಚಿಸಿದರು. ಅಬಕಾರಿ ಇಲಾಖೆ ವಿಷಯಕ್ಕೆ ಸಂಬಂಧಿಸಿ, ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಶಾಸಕರು ಸೂಚಿಸಿದರು.