ವಾರ್ಡ ನಂ. 3ರಲ್ಲಿ ಈ ಹಿಂದೆ ಸಾಮಾನ್ಯ ಇದ್ದು, ಈಗಲೂ ಸಾಮಾನ್ಯ ಬಂದಿರುವುದರಿಂದ ಹಾಲಿ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ವಾರ್ಡ್ ನಂ. 4ರಲ್ಲಿ ಈ ಹಿಂದೆ ‘ಸಾಮಾನ್ಯ’ ಇದ್ದು ಈಗ ಹಿಂದುಳಿದ ವರ್ಗ ‘ಎ‘ ಬಂದಿರುವುದರಿಂದ ಹಾಲಿ ಸದಸ್ಯ ಸುಧೀರ್ ಕೊಂಡ್ಲಿ, ವಾರ್ಡ್ ನಂ. 10ರಲ್ಲಿ ಈ ಹಿಂದೆ ಸಾಮಾನ್ಯ ಇದ್ದು ಈಗಲೂ ಸಾಮಾನ್ಯ ಬಂದಿರುವುದರಿಂದ ಹಾಲಿ ಸದಸ್ಯ ಗುರುರಾಜ ಶಾನಭಾಗ, ವಾರ್ಡ ನಂ. 11ರಲ್ಲಿ ಈ ಹಿಂದೆ ಸಾಮಾನ್ಯ ಇದ್ದು ಈಗ ಹಿಂದುಳಿದ ವರ್ಗ ‘ಎ’ ಬಂದಿರುವುದರಿಂದ ಹಾಲಿ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್, ವಾರ್ಡ್ ನಂ. 12ರಲ್ಲಿ ಈ ಹಿಂದೆ ‘ಸಾಮಾನ್ಯ ಮಹಿಳೆ’ ಇದ್ದು ಈಗಲೂ ‘ಸಾಮಾನ್ಯ ಮಹಿಳೆ’ ಬಂದಿರುವುದರಿಂದ ಮಂಜುಳಾ ಅವರಿಗೆ ಹಾಗೂ ವಾರ್ಡ್ ನಂ. 15ರಲ್ಲಿ ಈ ಹಿಂದೆ ಸಾಮಾನ್ಯ ಮಹಿಳೆ ಇದ್ದು, ಈಗಲೂ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿರುವುದರಿಂದ ಹಾಲಿ ಸದಸ್ಯೆ ರಾಧಿಕಾ ಕಾನಗೋಡ ಅವರುಗಳಿಗೆ ಮತ್ತೆ ಇದೇ ವಾರ್ಡ್‌ನಲ್ಲಿ ನಿಲ್ಲುವ ಅವಕಾಶ ದೊರಕಿದೆ.