ಯುಜಿಡಿಗೆ 450 ಕೋ.ರೂ. ನೀಡಲು ಮನವಿ

ಸಿದ್ದಾಪುರ ಪಪಂನಲ್ಲಿ ಶಾಸಕ ಭೀಮಣ್ಣ ನಾಯ್ಕ ನಗರೋತ್ಥಾನ ಹಂತ-4ರ ಯೋಜನೆಯಡಿ ಫಲಾನುಭವಿಗಳಿಗೆ ಸೋಲಾರ್ ವಾಟರ್ ಹೀಟರ್ ಹಾಗೂ ಸೋಲಾರ್ ದೀಪಗಳನ್ನು ವಿತರಿಸಿದರು. ಎಂ.ಆರ್.ಕುಲಕರ್ಣಿ, ಚಂದ್ರಕಲಾ ನಾಯ್ಕ, ಕೆ.ಜಿ.ನಾಯ್ಕ, ವಿನಯ ಹೊನ್ನೆಗುಂಡಿ ಇತರರಿದ್ದರು.
ಸಿದ್ದಾಪುರ ಪಪಂನಲ್ಲಿ ಶಾಸಕ ಭೀಮಣ್ಣ ನಾಯ್ಕ ನಗರೋತ್ಥಾನ ಹಂತ-4ರ ಯೋಜನೆಯಡಿ ಫಲಾನುಭವಿಗಳಿಗೆ ಸೋಲಾರ್ ವಾಟರ್ ಹೀಟರ್ ಹಾಗೂ ಸೋಲಾರ್ ದೀಪಗಳನ್ನು ವಿತರಿಸಿದರು. ಎಂ.ಆರ್.ಕುಲಕರ್ಣಿ, ಚಂದ್ರಕಲಾ ನಾಯ್ಕ, ಕೆ.ಜಿ.ನಾಯ್ಕ, ವಿನಯ ಹೊನ್ನೆಗುಂಡಿ ಇತರರಿದ್ದರು.
Published on
ಸಿದ್ದಾಪುರ: ಶಿರಸಿ ನಗರ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು 450 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸ್ಥಳೀಯ ಪಪಂ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ನಗರೋತ್ಥಾನ ಹಂತ-4ರ ಯೋಜನೆಯಡಿ ಫಲಾನುಭವಿಗಳಿಗೆ ಸೋಲಾರ್ ವಾಟರ್ ಹೀಟರ್ ಹಾಗೂ ಸೋಲಾರ್ ದೀಪಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿರಸಿ ನಗರ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಯುಜಿಡಿ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ತುಂಬಾ ಸಮಸ್ಯೆ ಎದುರಾಗುತ್ತಿದೆ. ಶಿರಸಿ ನಗರಸಭೆಗೆ 350 ಹಾಗೂ ಸಿದ್ದಾಪುರ ಪಟ್ಟಣಕ್ಕೆ ಯುಜಿಡಿ ಕಾಮಗಾರಿ ಕೈಗೊಳ್ಳಲು 100 ಕೋಟಿ ರೂ. ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿದೆ. ಸಿಎಂ ಅನುದಾನ ನೀಡುವ ಭರವಸೆ ನೀಡಿದ್ದು, ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವಿದ್ಯುತ್ ಉಳಿತಾಯದ ನಿಟ್ಟಿನಲ್ಲಿ ಪರಿಸರ ಸ್ನೇಹಿ ಸೌರಶಕ್ತಿಯ ಬಳಕೆ ಅಗತ್ಯವಾಗಿದೆ. ಸರ್ಕಾರವು ನಗರೋತ್ಥಾನ ಯೋಜನೆಯಡಿ ಇಂತಹ ಜನಪರ ಸೌಲಭ್ಯಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸೋಲಾರ್ ಉಪಕರಣಗಳ ಬಳಕೆಯಿಂದ ಮನೆಯ ವಿದ್ಯುತ್ ಬಿಲ್ ಉಳಿತಾಯವಾಗುವುದಲ್ಲದೆ, ಲೋಡ್ ಶೆಡ್ಡಿಂಗ್ ಸಂದರ್ಭದಲ್ಲಿಯೂ ಇದು ಜನರಿಗೆ ಸಹಕಾರಿಯಾಗಲಿದೆ. ಪ್ರತಿಯೊಂದು ಮನೆಯೂ ಇಂಧನ ಸ್ವಾವಲಂಬನೆ ಸಾಧಿಸಬೇಕು ಎಂಬುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದರು.
ಪಪಂ ಆಡಳಿತಾಧಿಕಾರಿ ಎಂ.ಆರ್. ಕುಲಕರ್ಣಿ, ಮುಖ್ಯಾಧಿಕಾರಿ ಮಹಮ್ಮದ್ ಯಾಕೂಬ್, ಪ್ರಮುಖರಾದ ಕೆ.ಜಿ. ನಾಯ್ಕ ಹಣಜೀಬೈಲ್, ಚಂದ್ರಕಲಾ ನಾಯ್ಕ, ವಿಜಯ ಹೊನ್ನೆಗುಂಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net