ಪ್ರವಾಸಿ ತಾಣಗಳ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ

ರೀಲ್ಸ್ ಸ್ಪರ್ಧೆ
ರೀಲ್ಸ್ ಸ್ಪರ್ಧೆ
Published on
ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ "ಕರಾವಳಿ ಉತ್ಸವ-2025" ನ್ನು ಆಚರಿಸುವ ಪ್ರಯುಕ್ತ ಸದರಿ ಉತ್ಸವದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಹಾಗೂ ಪ್ರಚಾರಕ್ಕಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ ಹಾಗೂ ಸಾಂಸ್ಕೃತಿಕ ಕಲೆ ಒಳಗೊಂಡ ರೀಲ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ.
ರೀಲ್ಸ್ಗಳನ್ನು ಸಲ್ಲಿಸಲು ಡಿ.19 ಕೊನೆಯ ದಿನವಾಗಿದೆ. ಕಳಿಸಬಹುದಾದ ರೀಲ್ಸ್ಗಳು 2 (ಒಂದು ನಿಮಿಷದೊಳಗೆ ಒಂದು ಹಾಗೂ ಮೂರು ನಿಮಿಷದೊಳಗಿನ ಒಂದು ರೀಲ್ಸ್ ), ವಿಜೇತರಿಗೆ 1st, 2nd, & 3rd ಬಹುಮಾನ ವಿತರಿಸಲಾಗುವುದು ಪ್ರಥಮ ಬಹುಮಾನ -ರೂ.10,000,ದ್ವಿತೀಯ ಬಹುಮಾನ - ರೂ.7,000, ತೃತೀಯ ಬಹುಮಾನ ರೂ.5,000 ಗಳಾಗಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಪಾರಂಪರಿಕ ತಾಣಗಳ ಹಾಗೂ ಸಾಂಸ್ಕೃತಿಕ ಕಲೆ ಒಳಗೊಂಡ ರೀಲ್ಸ್ ಮಾತ್ರ ಪರಿಗಣಿಸಲಾಗುವುದು.
ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಮಾತ್ರ ಭಾಗವಹಿಸುವುದು. ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ರೀಲ್ಸ್ಗಳ High Resolution ವಿಡಿಯೋವನ್ನು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ ಕಛೇರಿಯಲ್ಲಿ ನೀಡುವುದು. ರೀಲ್ಸ್ ಗಳನ್ನು ಸಲ್ಲಿಸುವಾಗ ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಖಾತೆ ಪುಸ್ತಕ ಪ್ರತಿ ಹಾಗೂ ಮೊಬೈಲ್ ನಂಬರ್ ಕಡ್ಡಾಯವಾಗಿ ಸಲ್ಲಿಸುವುದು. ಸ್ಪರ್ದೇಗೆ ಸಲ್ಲಿಸುವ ರೀಲ್ಸ್ ಮರಳಿ ನೀಡಲಾಗುವುದಿಲ್ಲ. ಸ್ಪರ್ಧೆಗೆ ನೀಡುತ್ತಿರುವ ರೀಲ್ಸ್ ಸ್ವಂತದ್ದಾಗಿರಬೇಕು. Copyright Act 1957 ಉಲ್ಲಂಘನೆಯಾಗದAತೆ ನೋಡಿಕೊಳ್ಳುವುದು. ಒಂದೊಮ್ಮೆ ಉಲ್ಲಂಘನೆಯಾಗಿದ್ದಲ್ಲಿ ಬಹುಮಾನವನ್ನು ಮರಳಿ ಪಡೆಯಲಾಗುವುದು. ಸ್ಪರ್ಧೆಗೆ ಸಲ್ಲಿಸುತ್ತಿರುವ ರೀಲ್ಸ್ ಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡುವುದು ಇದಕ್ಕೆ ಯಾವುದೇ ಶುಲ್ಕ ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿ ಅರ್ಹರಾದ ರೀಲ್ಸ್ ಗಳನ್ನು ಕರಾವಳಿ ಉತ್ಸವ ಮುಗಿಯುವವರೆಗೂ ಪ್ರಸಾರ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ, ಆರ್.ಟಿ.ಓ.ಆಫೀಸ್ ಹತ್ತಿರ e-mail-ddtourismkarwar@gmail.com ದೂರವಾಣಿ: 08382-221172, ಮೊಬೈಲ್ ನಂ. 8618404610 / 9036074715 ಕ್ಕೆ ಸಂಪರ್ಕಿಸುವAತೆ ಉಪ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅವರ ಪ್ರಕಟಣೆ ತಿಳಿಸಿದೆ.

ಕರಾವಳಿ ಉತ್ಸವ : ಛಾಯಾಚಿತ್ರ ಸ್ಪರ್ಧೆ

ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ "ಕರಾವಳಿ ಉತ್ಸವ-2025" ನ್ನು ಆಚರಿಸುವ ಪ್ರಯುಕ್ತ ಸದರಿ ಉತ್ಸವದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಹಾಗೂ ಪ್ರಚಾರಕ್ಕಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.
ಛಾಯಾಚಿತ್ರ ಸಲ್ಲಿಸಲು ಡಿ.19 ಕೊನೆಯ ದಿನವಾಗಿದೆ. ಛಾಯಾಚಿತ್ರ ಅಳತೆ 2x2.5 ಅಡಿ (with frame) ವಿಜೇತರಿಗೆ 1st, 2nd, & 3rd ಬಹುಮಾನ ವಿತರಿಸಲಾಗುವುದು.ಪ್ರಥಮ ಬಹುಮಾನ -ರೂ.10,000, ದ್ವಿತೀಯ ಬಹುಮಾನ - ರೂ.7,000,ತೃತೀಯ ಬಹುಮಾನ - ರೂ.5,000,
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಛಾಯಾಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯವರು ಮಾತ್ರ ಭಾಗವಹಿಸುವುದು. ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ಛಾಯಾಚಿತ್ರಗಳು High Resolution ಛಾಯಾಚಿತ್ರಗಳನ್ನು ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ ಕಛೇರಿಯಲ್ಲಿ ನೀಡುವುದು. ಛಾಯಾಚಿತ್ರಗಳನ್ನು ಸಲ್ಲಿಸುವಾಗ ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಖಾತೆ ಪುಸ್ತಕ ಪ್ರತಿ ಹಾಗೂ ಮೋಬೈಲ್ ನಂಬರ್ ಕಡ್ಡಾಯವಾಗಿ ಸಲ್ಲಿಸುವುದು. ಸಲ್ಲಿಸುವ ಛಾಯಾಚಿತ್ರಗಳು ಮರಳಿ ನೀಡಲಾಗುವುದಿಲ್ಲ. ಸ್ಪರ್ಧೆಗೆ ನೀಡುತ್ತಿರುವ ಛಾಯಾಚಿತ್ರಗಳು ಸ್ವಂತದ್ದಾಗಿರಬೇಕು. . Copyright Act 1957 ಉಲ್ಲಂಘನೆಯಾಗದAತೆ ನೋಡಿಕೊಳ್ಳುವುದು. ಒಂದೊಮ್ಮೆ ಉಲ್ಲಂಘನೆಯಾಗಿದ್ದಲ್ಲಿ ಬಹುಮಾನವನ್ನು ಮರಳಿ ಪಡೆಯಲಾಗುವುದು. ಸ್ಪರ್ಧೆಗೆ ಸಲ್ಲಿಸುತ್ತಿರುವ ಛಾಯಾಚಿತ್ರಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡುವುದು ಇದಕ್ಕೆ, ಯಾವುದೇ ಶುಲ್ಕ ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿ ಅರ್ಹರಾದ ಛಾಯಾಚಿತ್ರಗಳನ್ನು ಕರಾವಳಿ ಉತ್ಸವ ಮುಗಿಯುವವರೆಗೂ ಪ್ರದರ್ಶನ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ, ಆರ್.ಟಿ.ಓ.ಆಫೀಸ್ ಹತ್ತಿರ e-mail-ddtourismkarwar@gmail.com ದೂರವಾಣಿ: 08382-221172, ಮೊಬೈಲ್ ನಂ. 8618404610 / 9036074715 ಕ್ಕೆ ಸಂಪರ್ಕಿಸುವAತೆ ಉಪ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅವರ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net