ಕರಾವಳಿ ಉತ್ಸವದಲ್ಲಿ ಗಮನ ಸೆಳೆದ ರಂಗೋಲಿಗಳು

ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಗಮನ ಸೆಳೆಯಿತು
ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಗಮನ ಸೆಳೆಯಿತು
Published on
ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಬುಧವಾರ ನಡೆದ ರಂಗೋಲಿ ಹಾಗೂ ಕರಾವಳಿ ಶೈಲಿಯ ಅಡುಗೆ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮಹಿಳೆಯರು ಪಾಲ್ಗೊಂಡಿದ್ದು, ರಂಗೋಲಿಗಳು ನೋಡುಗರ ಕಣ್ಮನ ಸೆಳೆದರೆ ಕರಾವಳಿ ಶೈಲಿಯ ಅಡುಗೆಗಳು ಬಾಯಿ ಚಪ್ಪರಿಸುವಂತೆ ಮಾಡಿದವು.
ಎಂಜಿ ರಸ್ತೆಯ ನೂತನ ಪ್ರಜಾಸೌಧ ಕಟ್ಟಡದಲ್ಲಿ ಯೋಜಿಸಲಾದ ರಂಗೋಲಿ ಸ್ಪರ್ಧೆಯು ಬೆಳಗ್ಗೆಯಿಂದಲೇ ಆರಂಭವಾದ ಸ್ಪರ್ಧೆಗೆ ಅಭ್ಯಥಿಗಳು ಆಗಮಿಸಿ ತಮ್ಮ ನಿಯೋಜಿತ ಸ್ಥಳದಲ್ಲಿ ಬಗೆ ಬಗೆಯ ರಂಗೋಲಿ ಹಾಕಿದ್ದರು. ಸುಮಾರಿ 60 ಕ್ಕೂ ಹೆಚ್ಚು
ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹೂವಿನ ದಳಗಳಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿಗಳು ಹಾಗೂ ರಂಗೋಲಿ ಹಿಟ್ಟಿನಿಂದಲೇ ಕೆಲವು ರಂಗೋಲಿ ಹಾಕಿದ್ದರು. ಚುಕ್ಕಿ ರಂಗೋಲಿ, ದೇವರ ಚಿತ್ರಗಳಿರುವ ರಂಗೋಲಿ ಹಾಗೂ ಮಂಡಲ ಕಲೆಗಳಂತಹ ರಂಗೋಲಿಯು ಸ್ಪರ್ಧೆ ವೀಕ್ಷಿಸಲು ಬಂದ ಸಾರ್ವಜನಿಕರ ಗಮನ ಸೆಳೆದವು.

ವಿಜೇತರು:

14-18 ವರ್ಷದ ಮಕ್ಕಳಿಗೆ ಆಯೋಜಿಸಿದ್ದ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಸದಾಶಿವಗಡದ ಕಣಸಗಿರಿಯ ಧನಶ್ರೀ ರತ್ನಾಕರ ಮಾಳ್ವೇಕರ ಪ್ರಥಮ, ಹಬ್ಬುವಾಡದ ಆರ್ಯಶ್ರೀ ಎ ದುರ್ಗೇಕರ ದ್ವಿತೀಯ, ಹಬ್ಬುವಾಡದ ಸ್ಮೃತಿ ಸಂಜೀವ ವರ್ಣೇಕರ ತೃತೀಯ ಬಹಮಾನ ಪಡೆದುಕೊಂಡರು.
18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಕದ್ರಾದ ಸುಮಾ ಸುರೇಂದ್ರ ಪೆಡ್ನೇಕರ ಪ್ರಥಮ, ಬಾಡದ ಸಂಕ್ರಿವಾಡಾದ ಭಾರತಿ ಅರುಣ ನಾಯ್ಕ ದ್ವಿತೀಯ, ಗುರುಮಠದ ಕೊಮಲ್ ಮಂಜುನಾಥ ಪಾಳಂಕರ ತೃತೀಯ. 18
ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಕೋಡಿಭಾಗದ ರಾಸಿಕಾ ಕೆ.ಗೋಕರ್ಣ ಪ್ರಥಮ, ಬಿಣಗಾದ ಅರ್ಪಿತಾ ಅಶೋಕ ಗೌಡ ದ್ವಿತೀಯ, ಅಂಕೋಲಾದ ಪ್ರೇಮಾ ಆರ್.ಗಾಂವಕರ ತೃತೀಯ ಬಹಮಾನ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net