_1766041880631.webp?w=480&auto=format%2Ccompress&fit=max)
_1766041880631.webp?w=480&auto=format%2Ccompress&fit=max)
ಕಾರವಾರ: ಇಲ್ಲಿನ ಮಾರುತಿ ದೇವಸ್ಥಾನದ ಜಾತ್ರೆಯ ಅಂಗವಾಗಿ ರಚಿಸಿದ ರಂಗೋಲಿಗಳು ಗಮನ ಸೆಳದವು. ಕಾಂತಾರ, ನರೇಂದ್ರ ಮೋದಿ, ಗೋಕರ್ಣ ಪರ್ತಗಾಳಿ ಮಠದ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಗಳು, ಪರ್ತಗಾಳಿಯಲ್ಲಿ ನಿರ್ಮಾಣವಾದ 75 ಅಡಿಯ ಶ್ರೀ ರಾಮನ ವಿಗೃಹ, ಭಾರತೀಯ ಸೇನೆಯ ಕರ್ನಲ್ ಸೂಫಿಯಾ ಖುರೇಶಿ ಹೀಗೆ ಹಲವು ಅಪರೂಪರ ರಂಗೋಲಿಗಳು ಗಮನ ಸೆಳೆದವು.
ನವೀಕೃತ ಮಾರುತಿ ದೇವಸ್ಥಾನ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದು 25 ವರ್ಷಗಳು ಸಂದ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆ ಹೆಚ್ಚು ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಹೋಮಾದಿಗಳು ನಡೆದವು. ಬುಧವಾರ ವಾರ್ಷಿಕೋತ್ಸವ ಸಂಪನ್ನವಾಗಿದ್ದು, ಡಿ.18 ರಂದು ದಹಿಂಕಾಲ ಉತ್ಸವ ನಡೆಯಲಿದೆ.