ಪಟ್ಟಣದ ಹೊನ್ಮಾಂವ ವ್ಯಾಪ್ತಿಯ ನಾಗದೇವಿ ರಸ್ತೆ ಸನಿಹದ ಸದಾನಂದ ತಿಮ್ಮಪ್ಪ ಅಗ್ರವಾಡೇಕರ ಅವರ ಮನೆಯ ಮಹಡಿಯ ಮೇಲೆ ತೆಂಗಿನಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದ್ದು, ಯಾರಿಗೂ ಅಪಾಯ ಸಂಭವಿಸಿಲ್ಲ. ಬೆಟ್ಕುಳಿ ಸನಿಹದ ಮೊರಬದ ಮಾಲಿಗದ್ದೆ ರಸ್ತೆಯಲ್ಲಿ ಸಿಡಿಲು ಬಡಿದು ಮರವು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬವು ಅಲ್ಲಿನ ಯಾದವ ದಾನು ಹಳ್ಳೇರ ಮನೆ ಮೇಲೆ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಇಲ್ಲಿಯೂ ಯಾವುದೇ ಜನ ಅಥವಾ ಜಾನುವಾರುಗಳಿಗೆ ಹಾನಿಯಾಗಿಲ್ಲ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪಂಚನಾಮೆ ಮಾಡಿದ್ದಾರೆ.