Python ಚಿಕ್ಕಮಾವಳ್ಳಿಯಲ್ಲಿ ಹೆಬ್ಬಾವು ರಕ್ಷಣೆ

ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿಯಲ್ಲಿ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಹೆಬ್ಬಾವು.
ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿಯಲ್ಲಿ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಹೆಬ್ಬಾವು.
Published on
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯ ಚಿಕ್ಕಮಾವಳ್ಳಿಯ ಅಡಿಕೆ ತೋಟದಲ್ಲಿ ಹೆಬ್ಬಾವು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು.
ಸುಮಾರು 11.5 ಅಡಿ ಉದ್ದ, 22 ಕೆಜಿ ತೂಕದ ಈ ಹಾವನ್ನು ಉರಗ ರಕ್ಷಕ ರಮೇಶ ಬಡಿಗೇರ, ಲಕ್ಷ್ಮಣ ಪಮ್ಮಾರ ಹಾಗೂ ಪಾಂಡುರಂಗ ಮಾಪ್ಸೇಕರ್ ರಕ್ಷಿಸಿ ಕಾಡಿಗೆ ಬಿಟ್ಟರು. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗರಬಗುಡಿ, ಗ್ರಾಮಸ್ಥರಾದ ವಿಘ್ನೇಶ್ವರ ಹೆಗಡೆ, ಮಹಾಬಲೇಶ್ವರ ಹೆಗಡೆ, ಶೇಷಗಿರಿ ಹೆಗಡೆ, ಗಣಪತಿ ಹೆಗಡೆ, ಕುಮಾರ ಮರಾಠಿ, ನಾಗರಾಜ ಹೆಗಡೆ, ತರುಣ ಹೆಗಡೆ ಇತರರು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net