ಚಾಲಕನ ಮಕ್ಕಳಿಬ್ಬರೂ ಪಿಯುಸಿಯಲ್ಲಿ ಟಾಪರ್‌ ಗಳು

ಸಾಕ್ಷಿ ಹಾಗೂ ಸೌಜನ್ಯಾ
ಸಾಕ್ಷಿ ಹಾಗೂ ಸೌಜನ್ಯಾ
Published on
ಕಾರವಾರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಹೋದರಿಯರಿಬ್ಬರು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಇಲ್ಲಿನ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಕಲಾ ವಿಭಾಗದಲ್ಲಿ ಓದಿದ ಸಾಕ್ಷಿ ವಿನೋದ ನಾಯ್ಕ (97.50)ಹಾಗೂ ಸೌಜನ್ಯಾ ವಿನೋದ ನಾಯ್ಕ(96.33) ಕಾಲೇಜ್‌ಗೆ ಅನುಕ್ರಮವಾಗಿ ಪ್ರಥಮ ಹಾಗೂ ದ್ವೀತೀಯ ಸ್ಥಾನ ಪಡೆದಿದ್ದಾರೆ. ಸಾಕ್ಷಿ ನಾಯ್ಕ ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ.
ತಂದೆ ವಿನೋದ ನಾಯ್ಕ ಅವರು ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಅರೆಕಾಲಿಕವಾಗಿ ಚಾಲಕರ ಕೆಲಸ ಮಾಡುತ್ತಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳು. ದ್ವಿತೀಯ ಹಾಗೂ ತೃತೀಯ ಪುತ್ರಿಯರು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಬಿಣಗಾದ ಸೋಮನಾಥ ಪ್ರೌಢಶಾಲೆಯಲ್ಲಿ ಓದಿದ ಇಬ್ಬರೂ ಈಗ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಓದುತ್ತಿದ್ದಾರೆ. ಇಬ್ಬರೂ ಶಿಕ್ಷಕರಾಗುವ ಆಸಕ್ತಿ ಹೊಂದಿದ್ದು, ಪದವಿ ಶಿಕ್ಷಣ ಪಡೆದ ನಂತರ ಶಿಕ್ಷಕರಾಗುತ್ತೇವೆ ಎಂಬುದು ಅವರ ಕನಸು.
ಇಬ್ಬರೂ ಪರಸ್ಪರ ಪೈಪೋಟಿಯಲ್ಲಿ ಓದುತ್ತಿದ್ದೆವು. ಓದಿದ ವಿಷಯಗಳನ್ನು ಪರಸ್ಪರ ಚರ್ಚಿಸುತ್ತಿದ್ದೆವು. ಇದು ನಮಗೆ ಹೆಚ್ಚು ಸಹಕಾರಿಯಾಯಿತು ಎನ್ನುತ್ತಾರೆ ಸಾಕ್ಷಿ ವಿನೋದ ನಾಯ್ಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net