ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದಾಂಡೇಲಿಯಲ್ಲಿ 2016 ರಲ್ಲಿ ಜಿ ಪ್ಲಸ್ 2 ಮನೆಗಳ ಯೋಜನೆ ರೂಪಿಸಿ, 1106 ಮನೆಗಳ ನಿರ್ಮಾಣ ಕಾಮಗಾರಿಯನ್ನು 2018 ರಲ್ಲಿ ಆರ್‌ಎಸ್‌ಪಿ ಇನ್‌ಫ್ರಾ ಕನ್ಸ್ಸ್ಟಕ್ಷನ್ ಕಂಪನಿ ಕಾಮಗಾರಿ ಆರಂಭಿಸಿತ್ತು. ಕೆಎಚ್‌ಬಿ ಈ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಿತ್ತು. ಒಂದು ವರ್ಷದಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಎರಡು ವರ್ಷಗಳಲ್ಲಿ 108 ಮನೆಗಳನ್ನು ಮಾತ್ರ ಮುಗಿಸಿ ಹಸ್ತಾಂತರಿಸಲಾಗಿದೆ. ಆದರೆ, 108 ಮನೆಗಳ ಗ್ರಾಹಕರು ಬ್ಯಾಂಕ್ ಸಾಲಕ್ಕಾಗಿ ಓಡಾಡುತ್ತಿದ್ದಾರೆ. 108 ಮನೆಗಳಿಗೆ ಸಂಪರ್ಕಿಸಲು ಸಮರ್ಪಕ ರಸ್ತೆ, ಬೀದಿ ದೀಪದ ಸೌಕರ್ಯವನ್ನು ನಗರಸಭೆ ನೀಡಿಲ್ಲ. ಅದಕ್ಕಾಗಿ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.