ಗ್ರಾಪಂ ಎದುರು ಕಸದ ಬುಟ್ಟಿ ಇಟ್ಟು ಪ್ರತಿಭಟನೆ

ಚಿತ್ತಾಕುಲಾ ಗ್ರಾಪಂ ಎದುರು ಕರವೇ  ಪ್ರತಿಭಟನೆ ನಡೆಸಿದರು.
ಚಿತ್ತಾಕುಲಾ ಗ್ರಾಪಂ ಎದುರು ಕರವೇ ಪ್ರತಿಭಟನೆ ನಡೆಸಿದರು.
Published on
ಕಾರವಾರ: ಚಿತ್ತಾಕುಲಾ ಗ್ರಾಮದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಗ್ರಾಪಂ ಎದುರು ಕಸದ ಬುಟ್ಟಿಗಳನ್ನಿಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಪಂ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆ ನಡೆಸಿದರು. ನಂತರ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು. ಕಸದ ಸಮಸ್ಯೆ ಬಗೆಹರಿಸಲು ಇನ್ನೂ 7 ದಿನಗಳ ಗಡುವು ನೀಡಿದ್ದು, ಅಲ್ಲಿಯವರೆಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಯೋಜಿಸಲಾಗುವುದು ಎಂದರು.
ಗ್ರಾಮದಲ್ಲಿ ಸಾಕಷ್ಟು ಬಹು ಮಹಡಿ ಕಟ್ಟಡಗಳಿವೆ. ಒಂದು ಪೇಟೆಯಂತೆ ಬೆಳೆದಿದೆ. ಆದರೆ, ತ್ಯಾಜ್ಯ ಸಂಸ್ಕರಣೆ ಘಟಕ ಸಮರ್ಪಕವಾಗಿಲ್ಲ. ಇದರಿಂದ ತ್ಯಾಜ್ಯ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ಮನೆ ಹಾಗೂ ಅಪಾರ್ಟ್ಮೆಂಟ್‌ಗಳ ಜನ ರಸ್ತೆಯ ಪಕ್ಕ ಕಸ ತಂದು ಎಸೆಯುವಂತಾಗಿದೆ. ಚರಂಡಿಗಳಲ್ಲಿ ಕಸ ತುಂಬಿಕೊಂಡು ನೀರು ಶೇಖರಣೆಯಾಗಿದೆ. ಇದರಿಂದ ಸೊಳ್ಳೆ ಉತ್ಪತ್ತಿ ಜಾಸ್ತಿಯಾಗಿ ರೋಗದ ಭೀತಿ ಇದೆ.
ಜೆಜೆಎಂ ಯೋಜನೆಯಡಿ 1200 ರೂ.ಗಳನ್ನು ಪ್ರತಿ ಮನೆಯಿಂದ ಪಡೆಯಲಾಗಿದೆ. ಆದರೆ, ಹಲವು ಮನೆಗಳಿಗೆ ಇನ್ನೂ ನೀರು ಬರುತ್ತಿಲ್ಲ. ಮೀನು ಮಾರುಕಟ್ಟೆ, ಹಣ್ಣಿನ ಅಂಗಡಿ ಇದ್ದರೂ ಫುಟ್‌ಪಾತ್ ಮೇಲೆಯೇ ವ್ಯಾಪಾರ ನಡೆಯುತ್ತಿದೆ. ಅಕ್ರಮವಾಗಿ ಅಪಾರ್ಟ್ಮೆಂಟ್‌ಗಳಿಗೆ ಪರವಾನಗಿ ನೀಡಲಾಗಿದೆ. ಈ ಎಲ್ಲ ಸಮಸ್ಯೆಗಳನ್ನು ವಾರದಲ್ಲಿ ಬಗೆಹರಿಸಬೇಕು ಇಲ್ಲದಿದ್ದಲ್ಲಿ ಜಿಪಂ ಸಿಇಒ ಕಚೇರಿಯ ಎದುರು ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಅಕ್ಷಯ ಎಸ್.ಬಿ.ಪ್ರತಿಭಟನೆ ನಡೆಸಿದರು. ಪಿಡಿಒ ಮಂಜುನಾಥ ಟಿ.ಸಿ.ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net