ಕ್ರಿಮ್ಸ್ ಎದುರು ಶವರ ಇಟ್ಟು ಪ್ರತಿಭಟನೆ

ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟಿಸಲಾಯಿತು.
ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಅನಾರೋಗ್ಯದಿಂದ ಮೃತಪಟ್ಟವರ ಬಗ್ಗೆ ಎಲ್‌ಸಿ ದಾಖಲಿಸಿದ್ದಕ್ಕೆ ವಿರೋಧ
  • ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಅವರಿಂದ ಪ್ರತಿಭಟನೆ
ಕಾರವಾರ: ಮೃತ ವ್ಯಕ್ತಿಯೊಬ್ಬರ ಶವ ಬಿಟ್ಟುಕೊಡಲು ವಿಳಂಬ ಮಾಡಲಾಯಿತು ಎಂಬ ಕಾರಣಕ್ಕೆ ಅವರ ಸಂಬಂಧಿಕರು ಹಾಗೂ ಜನಶಕ್ತಿ ವೇದಿಕೆಯ ಪ್ರಮುಖರು ಕ್ರಿಮ್ಸ್ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಶುಕ್ರವಾರ ನಡೆಯಿತು.
ಜೊಯಿಡಾದಿಂದ ಗುರುವಾರ ತಡ ರಾತ್ರಿ ರಾತ್ರಿ ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆಗೆ ಆಗಮಿಸಿದ ಗೋವಿಂದ ನಾಯ್ಕ (60)ಎಂಬುವವರು ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದರು. ಆದರೆ, ಅವರ ಸಾವನ್ನು ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ಎಂದು ಪರಿಗಣಿಸಿದ ಕ್ರೀಮ್ಸ್ ವೈದ್ಯರು ಶವ ಪರೀಕ್ಷೆ ಮಾಡಬೇಕು ಎಂದು ತಿಳಿಸಿದ್ದರು.
ರಾತ್ರಿ ಮರಣೋತ್ತರ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಅಲ್ಲದೇ ಜೊಯಿಡಾದ ಪೊಲೀಸರು ಆಗಮಿಸುವವರೆಗೂ ಶವ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಲಾಗಿತ್ತು. ಇದರಿಂದ ಆತಂಕಗೊಂಡ ಸ್ಥಳೀಯರು ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಅವರಿಗೆ ಕರೆ ಮಾಡಿ ತಿಳಿಸಿದ್ದರು.
ಅನಾರೋಗ್ಯದಿಂದ ಮೃತಪಟ್ಟವರನ್ನು ಮೆಡಿಕೋ ಲೀಗಲ್ ಎಂದು ಪರಿಗಣಿಸಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಹಾಗೂ ಇತರರು ಶುಕ್ರವಾರ ಆಸ್ಪತ್ರೆಯ ಕೆಲ ಕಾಲ ಶವ ಇಟ್ಟು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್‌ ಪ್ರಮೋದ ನಾಯ್ಕ ಅವರಿಗೆ ಮನವಿ ನೀಡಿದರು.
ಇದು ಮೊದಲ ಪ್ರಕರಣವಲ್ಲ. ಹಲವರಿಗೆ ಇದೇ ರೀತಿ ಮಾಡಲಾಗುತ್ತದೆ. ಇದರಿಂದ ಮೃತರ ಕುಟುಂಬದವರು ತೊಂದರೆ ಅನುಭವಿಸಬೇಕಾಗುತ್ತದೆ. ಕ್ರಿಮ್ಸ್‌ ಡೀನ್‌ಗೆ ರಾತ್ರಿ ಕರೆ ಮಾಡಿ ತಿಳಿಸಿದ್ದೆ. ಎಂಎಲ್‌ಸಿ ರದ್ದು ಮಾಡುವಂತೆ ಮನವಿ ಮಾಡಿದ್ದೆ. ಅವರು ಒಪ್ಪಿದ್ದರು. ಆದರೆ, ಬೆಳಗ್ಗೆ 7.30 ರವರೆಗೂ ಶವ ಬಿಟ್ಟುಕೊಟ್ಟಿಲ್ಲ ಎಂದು ಮರಳಿ ಕರೆ ಮಾಡಿದಾಗ ಅವರು ಸರಿಯಾಗಿ ಪ್ರತಿಕ್ರಿಯಿಸಿಲ್ಲ. ನಂತರ 11 ಗಂಟೆಯ ಹೊತ್ತಿಗೆ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಮಾಧವ ನಾಯ್ಕ ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net