illegally transport: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ

ಅಕ್ರಮವಾಗಿ ಸಾಗಾಟ (  illegally transport ) ಮಾಡುತ್ತಿದ್ದ ಜಾನುವಾರುಗಳು.
ಅಕ್ರಮವಾಗಿ ಸಾಗಾಟ ( illegally transport ) ಮಾಡುತ್ತಿದ್ದ ಜಾನುವಾರುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಜೀಪ್ ಕಾಣುತ್ತಿದ್ದಂತೆ ಕಾರು ಬಿಟ್ಟು ಓಡಿದ ಆರೋಪಿತರು
ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ( illegally transport ) ಮಾಡುತ್ತಿದ್ದ ಆರೋಪಿತರು ಅರಣ್ಯ ಇಲಾಖೆಯ ಜೀಪ್ ಕಂಡ ತಕ್ಷಣ ಕಾರು ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಹಾಡುವಳ್ಳಿ ಗ್ರಾಮದ ಹಲ್ಯಾಣಿ ಬಳಿ ನಡೆದಿದೆ.
ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಆರೋಪಿತರು ಕಾರಿನಲ್ಲಿ ಮೂರ್ನಾಲ್ಕು ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದರು. ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ನೀರು ಹಾಗೂ ಹುಲ್ಲು ನೀಡದೆ ಸಾಗಿಸಲಾಗುತ್ತಿತ್ತು. ಸೋಮವಾರ ಬೆಳಗಿನ ಜಾವ ಹಲ್ಯಾಣಿ ಪ್ರದೇಶದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಅರಣ್ಯ ಇಲಾಖೆ ವಾಹನವನ್ನು ಕಂಡ ಆರೋಪಿತರು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆರೋಪಿತರ ವಿರುದ್ಧ ಗ್ರಾಮೀಣ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net