Livestock ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು Livestock ರಕ್ಷಿಸಿದ ಪೊಲೀಸರು.
ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು Livestock ರಕ್ಷಿಸಿದ ಪೊಲೀಸರು.
Published on
ಭಟ್ಕಳ: ಅಕ್ರಮವಾಗಿ ಜಾನುವಾರುಗಳನ್ನು Livestock ಸಾಗಾಟ ಮಾಡಿ ವಧೆ ಮಾಡಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿ, ಎರಡು ಎತ್ತುಗಳನ್ನು ರಕ್ಷಿಸಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಬಂದರ್ ರಸ್ತೆ 3ನೇ ಕ್ರಾಸ್ ನಿವಾಸಿ ಮಹಮ್ಮದ್ ಶಿಯಾಮ್ ಬಂಧಿತ. ಇತನ ಜತೆ ಇತರರು ಸೇರಿಕೊಂಡು 2 ಲಕ್ಷ ಮೌಲ್ಯದ ಎರಡು ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಗಳು ಬಂದರು ರೋಡ್ 6ನೇ ಕ್ರಾಸ್ ಸಮೀಪದ ಖಾಲಿ ಜಾಗಕ್ಕೆ ವಾಹನದ ಮೂಲಕ ಎತ್ತುಗಳನ್ನು ತಂದು, ಅವುಗಳಿಗೆ ನೀರು ಹಾಗೂ ಮೇವು ನೀಡದೆ ಕಟ್ಟಿ ಹಾಕಿ, ವಧೆ ಮಾಡುವ ಉದ್ದೇಶದಿಂದ ಬೇರೆಡೆಗೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದರು.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲಿದ್ದ ಎರಡು ಎತ್ತುಗಳನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆರೋಪಿಯ ವಿರುದ್ಧ ಪಿಎಸ್‌ಐ ತಿಮ್ಮಪ್ಪ ಎಸ್. ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಬರ್ಂಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net