ಸಿದ್ದಾಪುರ ತಾಲೂಕಿನ ಹಲವೆಡೆ ಮುಂಗಾರು ಪೂರ್ವ ಮಳೆ ಅಬ್ಬರ RAIN

ಶಿರಸಿ ರಾಜ್ಯ ಹೆದ್ದಾರಿಯ ಪಕ್ಕ ಗಾಳಿ.ಮಳೆಗೆ (Rain) ಮುರಿದು ಬಿದ್ದ ವಿದ್ಯುತ್ ಕಂಬ.
ಶಿರಸಿ ರಾಜ್ಯ ಹೆದ್ದಾರಿಯ ಪಕ್ಕ ಗಾಳಿ.ಮಳೆಗೆ (Rain) ಮುರಿದು ಬಿದ್ದ ವಿದ್ಯುತ್ ಕಂಬ.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದಾಪುರ ತಾಲೂಕಿನ ಹಲವೆಡೆ ಹಾನಿ
  • ಧರೆಗುರುಳಿದ 87ಕ್ಕೂ ಹೆಚ್ಚು ವಿದ್ಯುತ್ ಕಂಬಗಳು
  • ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತ
ಸಿದ್ದಾಪುರ: ತಾಲೂಕಿನ ಹಲವೆಡೆ ಮುಂಗಾರು ಪೂರ್ವದ ಗಾಳಿ-ಮಳೆಗೆ (Rain) ಅಪಾರ ಹಾನಿ ಸಂಭವಿಸಿದ್ದು, 87ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು ಅಂದಾಜು 22ರಿಂದ 23 ಲಕ್ಷರೂ.ಗಳಷ್ಟು ಹಾನಿ ಸಂಭವಿಸಿದೆ.
ಮಂಗಳವಾರ ಸಂಜೆ ಸುಮಾರು 7.15ರಿಂದ 8ಗಂಟೆಯವರೆಗೆ ಬೀಸಿದ ಗಾಳಿ-ಮಳೆಗೆ ಸಿದ್ದಾಪುರ-ಶಿರಸಿ ರಸ್ತೆಯ ಕುಣಜಿ ಸಮೀಪ ಭಾರಿ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಾಲಾಗಿ ಮುರಿದು ಬಿದ್ದಿದೆ.
ಮರ ಬಿದ್ದ ಪರಿಣಾಮ ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.
ಕೋಲಸಿರ್ಸಿ ಕ್ರಾಸ್‌ನಿಂದ ಹೇರೂರು ಮಾರ್ಗದಲ್ಲಿಯೂ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಡಿತಗೊಂಡಿದೆ.
ತಾಲೂಕಿನಲ್ಲಿ ಎಚ್‌ಟಿ ಕಂಬ 57 ಹಾಗೂ ಎಲ್‌ಟಿ ಕಂಬ 30ಮುರಿದು ಬಿದ್ದಿದೆ. ಇದಲ್ಲದೇ ಹಲವೆಡೆ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದೆ.
ಅಲ್ಲದೇ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ಜೋತಾಡುತ್ತಿದೆ. ಇದರಿಂದಾಗಿ ತಾಲೂಕಿನ ಕಾನಸೂರು, ಹಾರ್ಸಿಕಟ್ಟಾ, ಹೇರೂರು ಹಾಗೂ ಗ್ರಾಮೀಣ ಫಿಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದಂತಾಗಿದೆ.
ಹೆಸ್ಕಾಂ ಬುಧವಾರ ಬೆಳಗ್ಗೆಯಿಂದಲೇ ವಿದ್ಯುತ್ ಕಂಬ ಅಳವಡಿಸಿ ತಂತಿ ಎಳೆಯಲು ಪ್ರಾರಂಭಿಸಿದೆ. ಇನ್ನು ಗಾಳಿ-ಮಳೆಗೆ ಟಿಸಿ ಹಾಗೂ ಇನ್ಸುಲೇಟರ್ ಎಷ್ಟು ಹಾನಿಗೊಳಗಾಗಿದೆ ಎನ್ನುವುದು ತಿಳಿದುಬಂದಿಲ್ಲ.
ಯಾವುದಕ್ಕೂ ವಿದ್ಯುತ್ ಸಂಪರ್ಕ ನೀಡಿದ ಮೇಲೆಯೇ ತಿಳಿಯುತ್ತದೆ. ಬುಧವಾರ ಸಂಜೆಯೊಳಗಾಗಿ ವಿದ್ಯುತ್ ಸಂಪರ್ಕ ನೀಡುವುದಾಗಿ ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ವ್ಯವಸ್ಥೆ ಇಲ್ಲದ್ದರಿಂದ ತಾಲೂಕಿನಲ್ಲಿ ಬಿಎಸ್‌ಎನ್‌ಎಲ್ ದೂರವಾಣಿ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ಖಾಸಗಿ ಕಂಪನಿಯಾದ ಏರಟೇಲ್, ಜಿಯೋ ವ್ಯವಸ್ಥೆಯೂ ಹದಗೆಟ್ಟಿದೆ.
ಗಾಳಿ-ಮಳೆಯಿಂದ ವಿದ್ಯುತ್ ವ್ಯವಸ್ಥೆ ಇಲ್ಲದ್ದರಿಂದ ತಾಲೂಕಿನ ಹಲವೆಡೆ ಬುಧವಾರ ವಿವಾಹ ಕಾರ್ಯಕ್ರಮ ಸೇರಿದಂತೆ ಮತ್ತಿತರ ಮಂಗಲ ಕಾರ್ಯಕ್ಕೆ ತೊಡಕುಂಟಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net