ಮಂಜುಗುಣಿಯಲ್ಲಿ ಪ್ರಸಾದದ ಸಿದ್ಧತೆ ಜೋರು

ಶಿರಸಿ ತಾಲೂಕು ಮಂಜುಗುಣಿಯಲ್ಲಿ ಏ. 2ರಂದು ನಡೆಯಲಿರುವ ರಥೋತ್ಸವದಲ್ಲಿ ಭಕ್ತರಿಗೆ ನೀಡುವ ಸಲುವಾಗಿ ಅತ್ರಾಸ ಸಿದ್ಧಪಡಿಸುತ್ತಿರುವುದು.
ಶಿರಸಿ ತಾಲೂಕು ಮಂಜುಗುಣಿಯಲ್ಲಿ ಏ. 2ರಂದು ನಡೆಯಲಿರುವ ರಥೋತ್ಸವದಲ್ಲಿ ಭಕ್ತರಿಗೆ ನೀಡುವ ಸಲುವಾಗಿ ಅತ್ರಾಸ ಸಿದ್ಧಪಡಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವೆಂಕಟರಮಣ ದೇವಾಲಯದ ಮಹಾರಥೋತ್ಸವ ಏ. 2ರಂದು
ಶಿರಸಿ: ತಾಲೂಕಿನ ಮಂಜುಗುಣಿ ಶ್ರೀ ವೆಂಕಟರಮಣ ದೇವಾಲಯದ ಮಹಾರಥೋತ್ಸವ ಏ. 2ರಂದು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ನೀಡುವ ಸಲುವಾಗಿ 15 ಸಾವಿರ ಅತ್ರಾಸ, 2 ಸಾವಿರ ಲಡ್ಡು ಪ್ರಸಾದ ತಯಾರಿಸಲಾಗುತ್ತಿದೆ. ಕಳೆದ ಎಂಟು ದಿನಗಳಿಂದ ದೇವಸ್ಥಾನದ ಪ್ರಸಾದಾಲಯದಲ್ಲಿ ನಿರಂತರವಾಗಿ ಪ್ರಸಾದ ತಯಾರಿಸುವ ಕಾರ್ಯ ನಡೆಯುತ್ತಿದೆ. ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕ ಪದಾರ್ಥಗಳಿಂದಲೇ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಪ್ರಸಾದ ತಯಾರಿಕಾ ತಜ್ಞರು ಮತ್ತು ಸ್ವಯಂಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮೂವರು ಪ್ರಸಾದ ತಯಾರಿಕಾ ಪರಿಣತರು ಅತ್ರಾಸ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಇಬ್ಬರು ತಯಾರಕರು ಕಳೆದ ಎಂಟು ದಿನಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಪೂರ್ಣ ಸಿದ್ಧತೆಯ ಉಸ್ತುವಾರಿಯನ್ನು ಪ್ರಮುಖರಾದ ಗಣಪತಿ ಭಟ್ ಸೂರನಜಡ್ಡಿ ವಹಿಸಿಕೊಂಡಿದ್ದಾರೆ. ಏಪ್ರಿಲ್ 2ರಂದು ನಡೆಯುವ ರಥೋತ್ಸವಕ್ಕೆ ಜಿಲ್ಲಾದ್ಯಂತ ಹಾಗೂ ಹೊರಜಿಲ್ಲೆಗಳಿಂದಲೂ ಭಕ್ತಸಾಗರವೇ ಹರಿದುಬರುವ ನಿರೀಕ್ಷೆಯಿದೆ. ಬಂದ ಭಕ್ತರೆಲ್ಲರಿಗೂ ಶ್ರೀ ದೇವಸ್ಥಾನದ ಈ ವಿಶೇಷ ಪ್ರಸಾದ ಬೇಕಿದ್ದಲ್ಲಿ ತಲುಪುವಂತೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ವಯಂಸೇವಕರು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net