ಯುವ ಕಾಂಗ್ರೆಸ್‌ನಿಂದ ಕೇಂದ್ರದ ವಿರುದ್ಧ ಪೋಸ್ಟರ್‌ ಅಭಿಯಾನ

ಕಾರವಾರದಲ್ಲಿ ಯುವ ಕಾಂಗ್ರೆಸ್‌ ಮುಖಂಡರು ಪೋಸ್ಟರ್‌ ಅಭಿಯಾನ ನಡೆಸಿದರು.
ಕಾರವಾರದಲ್ಲಿ ಯುವ ಕಾಂಗ್ರೆಸ್‌ ಮುಖಂಡರು ಪೋಸ್ಟರ್‌ ಅಭಿಯಾನ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ
  • ಪದಾಧಿಕಾರಿಗಳ ಸಭೆ
ಕಾರವಾರ:

ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪೋಸ್ಟರ್ ಅಭಿಯಾನ ನಡೆಸಿದರು.

ನಗರದ ಪೆಟ್ರೊಲ್ ಪಂಪ್ ಒಂದರ ಎದುರು ಸೇರಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ನಂತರ ಕೇಂದ್ರ ಸರ್ಕಾರಕ್ಕೆ ಽಕ್ಕಾರ ಕೂಗಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಮೋದಿ ಹಾಗೂ ಅಮಿತ್ ಷಾ ಕಾರಣ ಎಂದು ಆರೋಪಿಸಿದರು. ನಗರಸ ವಿವಿಧೆಡೆ ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟ್ಗಳನ್ನು ಹಚ್ಚಿದರು.
ಇದಕ್ಕೂ ಪೂರ್ವದಲ್ಲಿ ಕಾರವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಭೆ ನಡೆಯಿತು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಹಾಗೂ ಉತ್ತರ ಕನ್ನಡ ಉಸ್ತುವಾರಿ ಚೈತ್ರಾ ವಿ. ಗಿರೀಶಕುಮಾರ್, ಕಾರ್ಯದರ್ಶಿಗಳಾದ ಅಭಿನಂದನ್, ಅಲಿ ಖುರೇಷಿ, ಪವನ್ ನಾಯ್ಕ, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಸೈಯದ್ ಅಶ್ರಫ್ ಖಾದ್ರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಮೋದ ಸಿರ್ಸಿಕರ್, ಉಪಾಧ್ಯಕ್ಷ ಹರೀಶ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಕಾವ್ಯಾನಂದ ನಾಯ್ಕ್, ಸಿದ್ದಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಕುಮಾರ್ ನಾಯ್ಕ್,ಪೂರ್ಣ ನಾಯ್ಕ, ಜಯಶೀಲ ನಾಯ್ಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net