ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಚಂದ್ರಶೇಖರ, ಕಾಮಗಾರಿ ವ್ಯತ್ಯಾಸ ಆಗಿದೆ. ಇದರಿಂದಾಗಿ ಇಲ್ಲಿಯ ಜನ ಜೀವನಕ್ಕೂ ಸಮಸ್ಯೆ ಆಗಿದೆ. ಈ ಕುರಿತಂತೆ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರೊಂದಿಗೆ ಮಾತನಾಡಿ, ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಸಭೆ ನಡೆಸಿದ್ದಾಗ ಗುತ್ತಿಗೆದಾರರು 15 ದಿನ ಸಮಯಾವಕಾಶ ಕೇಳಿ, 8 ಕಿಮೀ ಡಾಂಬರೀಕರಣ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ, ಆ ಬಳಿಕವೂ ಕಾಮಗಾರಿ ವಿಳಂಬವಾಗಿದ್ದು, ಮುಖ್ಯ ಗುತ್ತಿಗೆದಾರರಿಗೆ ಸೂಚನಾಪತ್ರ ಕಳಿಸಿದ್ದೇವೆ ಎಂದರು.