ಗೋವಾದಿಂದ ಜಿಲ್ಲೆಯ ವಿವಿಧ ಹೋಟೆಲ್, ರೆಸಾರ್ಟ್ಗಳಿಗೆ ಸಾರಾಯಿ ಸಾಗಣೆ ಮಾಡುವುದನ್ನು ಆತ ವೃತ್ತಿ ಮಾಡಿಕೊಂಡಿದ್ದ. ಕಾರವಾರದ ಚಿತ್ತಾಕುಲಾ, ಕದ್ರಾ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹಿಡಿದ ಚಾಳಿಯನ್ನು ಆತ ಬಿಡದೇ ಮುಂದುವರಿಸಿದ್ದ. ಗೋಕರ್ಣ ಪೊಲೀಸ್‌ಠಾಣೆಯಲ್ಲಿ ಇದ್ದಾಗ ಗೋವಾ ಸಾರಾಯಿ ಸಾಗಿಸಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಅಮಾನತಾಗಿದ್ದ. ಆ ಪ್ರಕರಣ ಮುಗಿಯುವ ಮೊದಲೇ ಇನ್ನೂ ಎರಡು ಬಾರಿ ಸಾರಾಯಿ ಸಾಗಣೆ ವೇಳೆ ಆತ ಇರುವುದು ಪತ್ತೆಯಾಗಿತ್ತು.