ಕೇರಳ ಕೊಚುವಲಿಯಿಂದ ರಾಜಸ್ತಾನದ ಗಂಗಾನಗರಕ್ಕೆ ತೆರಳುವ ರೈಲು ಮುರ್ಡೇಶ್ವರ ನಿಲ್ದಾಣದ ಬಳಿ ಬರುತ್ತಿದ್ದಂತೆ ಮೊಹಮ್ಮದ್ ಗಫೂರ್ ಎಂಬ ಪ್ರಯಾಣಿಕ ಇಳಿಯಲು ಯತ್ನಿಸಿದ. ಆದರೆ, ರೈಲು ಚಲಿಸುತ್ತಲೇ ಇರುವ ಕಾರಣ ಆತ ಬಿದ್ದು, ರೈಲಿಗೆ ಸಿಲುಕಿ ಹಳಿಯಲ್ಲಿ ಬೀಳುವ ಅಪಾಯದಲ್ಲಿದ್ದ. ರೈಲಿಗೆ ಹಸಿರು ನಿಷಾನೆ ತೋರುವ ಸಲುವಾಗಿ ಅಲ್ಲೇ ನಿಂತಿದ್ದ ಪಾಯಿಂಟ್ ಮ್ಯಾನ್ ಗಣಪತಿ ನಾಯ್ಕ ತಕ್ಷಣ ಸ್ಪಂದಿಸಿ, ಸ್ವತಃ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಪ್ರಯಾಣಿಕನನ್ನು ಎಳೆದು ರಕ್ಷಿಸಿದ್ದಾರೆ. ಅವರ ಸಾಹಸದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.