ದೈಹಿಕ ಹಿನ್ನಡೆ ವಿದ್ಯಾಭ್ಯಾಸಕ್ಕೆ ತೊಡಕಾಗದಿರಲಿ

ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ದೈಹಿಕ ಸಮಸ್ಯೆ ಉಳ್ಳ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ  ನೀಡುವ ಉಪಕರಣಗಳನ್ನು ಶಾಸಕ ಭೀಮಣ್ಣ ನಾಯ್ಕ ಸಲಕರಣೆ ವಿತರಿಸಿದರು. ನಾಗರಾಜ ನಾಯ್ಕ, ದೇವರಾಜ ಮರಾಠೆ ಇತರರಿದ್ದರು.
ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ದೈಹಿಕ ಸಮಸ್ಯೆ ಉಳ್ಳ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೀಡುವ ಉಪಕರಣಗಳನ್ನು ಶಾಸಕ ಭೀಮಣ್ಣ ನಾಯ್ಕ ಸಲಕರಣೆ ವಿತರಿಸಿದರು. ನಾಗರಾಜ ನಾಯ್ಕ, ದೇವರಾಜ ಮರಾಠೆ ಇತರರಿದ್ದರು.
Published on
ಶಿರಸಿ: ದೈಹಿಕವಾಗಿ ಹಿನ್ನಡೆ ಅನುಭವಿಸುತ್ತಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು. ಅವರ ಬಗ್ಗೆ ವಿಶೇಷ ಕಾಳಜಿ ತೋರಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ದೃಷ್ಟಿ ದೋಷ, ಶ್ರವಣ ಸಮಸ್ಯೆ ಸೇರಿದಂತೆ ದೈಹಿಕ ಕೊರತೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೀಡುವ ಉಪಕರಣಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಶುಕ್ರವಾರ ವಿತರಿಸಿ ಅವರು ಮಾತನಾಡಿದರು. ಪ್ರತಿ ವ್ಯಕ್ತಿಗೆ ಶಿಕ್ಷಣ ಅತ್ಯಗತ್ಯ. ಬಾಲ್ಯದಲ್ಲಿ ದೈಹಿಕ ಕೊರತೆ ಕಾರಣದಿಂದ ಅವರು ಶಿಕ್ಷಣದಿಂದ ವಂಚಿತರಾದರೆ ಜೀವನ ಪೂರ್ತಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ. ಈ ಹಂತದಲ್ಲಿ ತಾವು ಒಂಟಿ ಎಂಬ ಮನೋಭಾವನೆ ಮಕ್ಕಳಲ್ಲಿ ಬೆಳೆಯಬಾರದು. ಈ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಅಗತ್ಯ ಸೌಲಭ್ಯ ಒದಗಿಸುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆಗಾಗಿ ರಾಜ್ಯ ಸರ್ಕಾರ ಕಳೆದ ವರ್ಷ ಸಮೀಕ್ಷೆ ನಡೆಸಿತ್ತು. ಅವರಿಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಪ್ರತಿ ವಿದ್ಯಾರ್ಥಿಯನ್ನು ವೈದ್ಯರ ಮೂಲಕ ಪರೀಕ್ಷೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಈ ವರ್ಷ ನ. 25ಕ್ಕೆ ಅಂಗವಿಕಲರ ತಪಾಸಣೆ ಕ್ಯಾಂಪ್ ನಡೆಯಲಿದೆ ಎಂದರು. ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠೆ, ಪ್ರಮುಖರಾದ ದಿನೇಶ ಶೇಟ್ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net