ಭಟ್ಕಳ ಪಟ್ಟಣಕ್ಕೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥಕ್ಕೆ (Shri Ram Digvijaya Rath) ಭಾನುವಾರ ಸಚಿವ ಮಂಕಾಳ ವೈದ್ಯ ಪೂಜೆ ಸಲ್ಲಿಸಿ ರಥದ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀರಾಮ ದಿಗ್ವಿಜಯ ರಥಕ್ಕೆ ಪೂಜೆ
ಭಕ್ತ ಸಮುದಾಯದಿಂದ ರಥಕ್ಕೆ ಭಜನೆ, ಕೀರ್ತನೆ ಸೇವೆ
ಸಚಿವ ಮಂಕಾಳ ವೈದ್ಯರಿಂದ ಪ್ರಯಾಣಕ್ಕೆ ಅನುವು
ಭಟ್ಕಳ: ಪಟ್ಟಣಕ್ಕೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥಕ್ಕೆ (Shri Ram Digvijaya Rath) ಸಚಿವ ಮಂಕಾಳ ವೈದ್ಯ ಭಾನುವಾರ ಪೂಜೆ ಸಲ್ಲಿಸಿ ರಥದ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.
ಪಟ್ಟಣದ ವಠೇರಮಠ ಮೈದಾನದಲ್ಲಿ ಶನಿವಾರ ರಾತ್ರಿ ತಂಗಿದ್ದ ರಥವು ಭಾನುವಾರ ಪಟ್ಟಣದ ಜಪಕೇಂದ್ರವಾದ ತಿರುಮಲ ದೇವಸ್ಥಾನ ತಲುಪಿ ಬಳಿಕ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿ ಪೂಜೆ ಪಡೆಯಿತು. ಹೂವಿನ ಮಾರ್ಕೆಟ್ ಮೂಲಕ ಸಾಗಿ ಪಟ್ಟಣದ ಮಾರಿಗುಡಿ, ಜನತಾ ಬ್ಯಾಂಕ್ ಮೂಲಕ ಸಾಗಿ ರಘುನಾಥ ದೇವಸ್ಥಾನ ಬಳಿ ಬಂದಿತು.
ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಶ್ರೀರಾಮ ನಾಮ ಜಪ ನಡೆಸಿದ ದೇವಸ್ಥಾನಗಳಿಗೆ ಸಂಚರಿಸಿ ಹಣ್ಣುಕಾಯಿ ಸೇವೆ ಪಡೆಯಿತು. ಪಟ್ಟಣದ ರಘುನಾಥ ದೇವಸ್ಥಾನದ ಬಳಿ ಆಗಮಿಸಿದ ರಥಕ್ಕೆ ಸಚಿವ ಮಂಕಾಳ ವೈದ್ಯ ತೆರಳಿ ಪೂಜೆ ಸಲ್ಲಿಸಿದರು. ಸುಮಾರು 1 ಗಂಟೆಯ ಕಾಲ ಇದ್ದ ರಥಕ್ಕೆ ಭಕ್ತ ಸಮುದಾಯ ಭಜನೆ ಕೀರ್ತನೆ ಸಲ್ಲಿಸಿ ಕೃತಾರ್ಥರಾದರು.
ವೆಂಕಟಾಪುರ ಜಪಕೇಂದ್ರವರು ಭಟ್ಕಳಕ್ಕೆ ಆಗಮಿಸಿ ರಥವನ್ನು ಸ್ವಾಗತಿಸಿ ತಮ್ಮ ಮೊಕ್ಕಾಂಗೆ ಕರೆದೊಯ್ದರು.