ಕಾರವಾರದ ಬಂಗಾರಪ್ಪ ನಗರದ ವಿಜಯಾ ಹಾಗೂ ಉಡುಪಿ ಜಿಲ್ಲೆಯ ಮೂಲದ ವೆಂಕಟೇಶ ಅವರಿಗೆ ಇಬ್ಬರು ಮಕ್ಕಳು. ಶಿರವಾಡದಲ್ಲೇ ಇಬ್ಬರೂ ಜೀವನ ನಡೆಸುತ್ತಿದ್ದರು. ಒಂದುವರೆ ತಿಂಗಳ ಹಿಂದೆ ಬೈಕ್‌ನಿಂದ ಬಿದ್ದ ಅವರ 10 ವರ್ಷದ ಮಗ ಶರತ್ ತೀವ್ರವಾಗಿ ಗಾಯಗೊಂಡಿದ್ದ. ಆತತ ತಲೆಗೆ ಪೆಟ್ಟು ಬಿದ್ದಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆ ಮುಂದುವರಿಸಲಾಗಿತ್ತು. ಶರತ್‌ಗೆ 18 ರ‍್ಷವಾದ ಮೇಲೆ ಇನ್ನೊಮ್ಮೆ ತಲೆ ಚಿಪ್ಪು ತೆಗೆದು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ತಾಯಿ ವಿಜಯಾ ಗಂಡನ ಜೊತೆ ಜಗಳಕ್ಕೆ ಇಳಿಯುತ್ತಿದ್ದಳು ಎನ್ನಲಾಗಿದೆ. ಭಾನುವಾರ ವಿಷಯ ವಿಪರೀತಕ್ಕೆ ಹೋಗಿ ಅನಾಹುತವಾಗಿದೆ. ಆದರೆ, ತಂದೆ, ತಾಯಿಯ ದುಡುಕಿನಿಂದ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.