ತೆರಿಗೆ ವಸೂಲಾತಿಯಲ್ಲಿ ಹೆಚ್ಚು ಪ್ರಗತಿ ಸಾಽಸಿದ ಹಳಿಯಾಳ ತಾಪಂ ಇಒ ವಿಲಾಸರಾಜ್, ತೆರಿಗೆ ವಸೂಲಾತಿಯಲ್ಲಿ ಸಾಧನೆ ಮಾಡಿದ ಕಾರವಾರ ಮಲ್ಲಾಪುರ ಗ್ರಾಪಂ ಪಿಡಿಒ ರಾಜೇಶ ನಾಯ್ಕ, ಬಿಲ್ ಕಲೆಕ್ಟರ್ ಪ್ರಕಾಶ ನಾಯ್ಕ, ಅಂಕೋಲಾದ ಶೆಟಗೇರಿ ಪಿಡಿಒ ಗಿರೀಶ ತಳವಾರ, ಬಿಲ್ ಕಲೆಕ್ಟರ್ ಬಲೀಂದ್ರ ಗೌಡ, ಮಹಿಳಾ ಉಪಕ್ರಮವನ್ನು ಅನುಷ್ಠಾನಗೊಳಿಸಿದ ಯಲ್ಲಾಪುರ ವಜ್ರಳ್ಳಿ ಪಿಡಿಒ ರವಿ ಪಟಗಾರ, ಎನ್‌ಆರ್‌ಎಲ್‌ಎಂ ಸ್ವ ಸಹಾಯ ಸಂಘದ ಅಧ್ಯಕ್ಷೆ ಅನ್ನಪೂರ್ಣಾ ರಾಮಚಂದ್ರ ಭಟ್ಟ, ಕಾರ್ಯದರ್ಶಿ ಗಾಯತ್ರಿ ಗಾಂವಕರ್, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಬೆಳಂಬರ ಪಿಡಿಒ ವಿದ್ಯಾ ವಿ.ಗೌಡ, ದೇವನಹಳ್ಳಿ ಗ್ರಾಪಂನ ಕುಮಾರ ಸಿ.ವಾಸನ್, ತಾಲೂಕು ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ಕದ್ರಾ ಗ್ರಾಪಂನ ಪಿಡಿಒ ಮಧುರಾ ಜಿ.ನಾಯ್ಕ, ಹೊನ್ನಾವರ ಖರ್ವಾ ಪಿಡಿಒ ಗಿರೀಶ ನಾಯಕ, ಭಟ್ಕಳ ಮಾವಿನಕುರ್ವಾ ಪಿಡಿಒ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್, ಯೋಜನಾ ನಿರ್ದೇಶಕ ಕರೀಂ ಅಸದಿ ಇದ್ದರು.