ಅಧಿಕಾರಿಗಳ ನಿರ್ಲಕ್ಷೃಕ್ಕೆ ಭತ್ತದ ಬೆಳೆ ನಾಶ Crop loss

 ಶಿರಸಿ ತಾಲೂಕು ಸೋಂದಾ ಕೋಟೆಯಲ್ಲಿ ಕೆರೆಯ ನೀರು ಕಟಾವಿಗೆ ಬಂದ ಭತ್ತದ ಗದ್ದೆಯ ಮೇಲೆ ಹರಿದಿರುವುದು. Crop Loss
ಶಿರಸಿ ತಾಲೂಕು ಸೋಂದಾ ಕೋಟೆಯಲ್ಲಿ ಕೆರೆಯ ನೀರು ಕಟಾವಿಗೆ ಬಂದ ಭತ್ತದ ಗದ್ದೆಯ ಮೇಲೆ ಹರಿದಿರುವುದು. Crop Loss
Published on
ಶಿರಸಿ: ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೆರೆಯ ಪೈಪ್ ಒಡೆದು ಕಟಾವಿಗೆ ಬಂದಿದ್ದ ಮುಕ್ಕಾಲು ಎಕರೆ ಭತ್ತದ ಬೆಳೆ ನಾಶವಾದ (crop Loss) ಘಟನೆ ತಾಲೂಕಿನ ಸೋಂದಾದ ಕೋಟೆಯಲ್ಲಿ ಭಾನುವಾರ ಸಂಭವಿಸಿದೆ.
ಇಲ್ಲಿಯ ಸುಬ್ರಾಯ ಗಣಪತಿ ಹೆಗಡೆ ಅವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದ್ದು, ಮಠ ದೇವಳ ಗ್ರಾಮದ ಕೆರೆಯನ್ನು ಹೂಳೆತ್ತುವ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆ ಕಳೆದ ಬೇಸಿಗೆಯಲ್ಲಿ ನಡೆಸಿತ್ತು.
ಹೂಳು ತೆಗೆದು ಸ್ವಚ್ಛಗೊಳಿಸುವ ಸಲುವಾಗಿ ಇಲ್ಲಿಯ ರೈತರಲ್ಲಿ ಕೃಷಿ ಭೂಮಿಯನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳುವುದಾಗಿ ಇಲಾಖೆ ಸ್ಥಳೀಯ ರೈತರನ್ನು ಕೇಳಿಕೊಂಡಿತ್ತು.
ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವ ಸಲುವಾಗಿ ಸುಬ್ರಾಯ ಹೆಗಡೆ ತಮ್ಮ ಭತ್ತದ ಗದ್ದೆಯಲ್ಲಿ ಹೂಳು ಹಾಕಲು ಅವಕಾಶ ನೀಡಿದ್ದರು. ಅಲ್ಲದೇ, ರೈತರದಾದ ನಮಗೆ ಈ ಜಾಗದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೇ ಆರ್ಥಿಕವಾಗಿ ನಷ್ಟವಾಗುತ್ತದೆ.
ಹೀಗಾಗಿ ಕೆರೆಯ ಹೂಳು ಎತ್ತಿದ ಬಳಿಕ ತನ್ನ ಗದ್ದೆಯಲ್ಲಿ ಹಾಕಲಾದ ಮಣ್ಣು ಮತ್ತು ಕಸವನ್ನು ಇಲಾಖೆ ಸ್ವಚ್ಛಗೊಳಿಸಿಕೊಡಬೇಕು ಎಂಬ ಬೇಡಿಕೆಯೊಂದಿಗೆ ಅವರು ಒಪ್ಪಿಗೆ ಸೂಚಿಸಿದ್ದರು.
ಸುಬ್ರಾಯ ಹೆಗಡೆ ಅವರು ಹೇಳುವಂತೆ ಹೂಳೆತ್ತುವ ಕಾರ್ಯ ಪೂರ್ಣಗೊಂಡ ಬಳಿಕ ಇಲಾಖೆ ಅವರ ಗದ್ದೆಯಲ್ಲಿ ಹಾಕಿದ್ದ ಕಸ, ಮಣ್ಣನ್ನು ತೆರವುಗೊಳಿಸಿಲ್ಲ.
ಆದರೆ, ಮಳೆಗಾಲ ಅಷ್ಟರಲ್ಲಿ ಆರಂಭವಾದ ಕಾರಣ ಅನಿವಾರ್ಯವಾಗಿ ತಾನೇ ಕೂಲಿಯಾಳುಗಳನ್ನು ಬಳಸಿಕೊಂಡು ಇಲಾಖೆ ತನ್ನ ಹೊಲದಲ್ಲಿ ಎಸೆದಿದ್ದ ಕಸ ಮಣ್ಣನ್ನು ತೆರವುಗೊಳಿಸಿಕೊಂಡು ಭತ್ತದ ಕೃಷಿ ಮಾಡಿದ್ದೇನೆ.
ಆದರೆ, ಭತ್ತ ಈಗ ಬೆಳೆದು ಕಟಾವಿಗೆ ಇನ್ನು 15 ದಿನಗಳು ಬಾಕಿ ಇರುವಾಗ ಈ ಘಟನೆ ನಡೆದಿದೆ.
ಒಂದು ವಾರದ ಹಿಂದೆ ಗುತ್ತಿಗೆದಾರರು, ಇಂಜಿನಿಯರ್‌ಗಳು ಸಂಪರ್ಕಿಸಿ, ಇನ್ನೊಮ್ಮೆ ಕೆರೆಯನ್ನು ಖಾಲಿ ಮಾಡಬೇಕಿದೆ. ನಿಮ್ಮ ಹೊಲದಲ್ಲಿ ನೀರು ಹರಿದುಹೋಗಲು ಅವಕಾಶ ಮಾಡಿಕೊಂಡಿ ಎಂದು ಕೇಳಿದ್ದರು.
ಭತ್ತದ ಗದ್ದೆ ಕಟಾವು ಕಾರ್ಯ ಇನ್ನೂ ಆಗಿಲ್ಲ, ಆದ ಬಳಿಕ ಈ ಬಗ್ಗೆ ಮಾತಾಡೋಣ ಎಂದಿದ್ದೆ. ಆದರೆ, ಕೆರೆಗೆ ಹಾಕಲಾದ ತೂಬಿನ ಪೈಪ್ ಒಡೆದ ಕಾರಣ ಒಮ್ಮೆಲೇ ಬೃಹತ್ ಪ್ರಮಾಣದ ನೀರು ಭತ್ತದ ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಲಕ್ಷಾಂತರ ರೂ. ಹಾನಿ ಆಗಿದೆ.
ಇಷ್ಟು ದಿನಗಳ ನನ್ನ ಶ್ರಮ ಹಾಳಾಗಿದ್ದು ಮುಂದೇನು ಮಾಡಬೇಕು ಎಂದು ತಿಳಿಯದಂತಾಗಿದೆ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net