

ಪ್ರಮುಖ ಮುಖ್ಯಾಂಶಗಳು
ಗೋಕರ್ಣ:ಕಲೆಗಳಪೋಷಣೆಯಿಂದ ಆತ್ಮ ವಿಕಾಸspiritual-developmentಸಾಧಿತವಾಗುತ್ತದೆ.ಈಹಿನ್ನೆಲೆಯಲ್ಲಿ ವಿಷ್ಣುಗುಪ್ತವಿಶ್ವವಿದ್ಯಾಪೀಠ ಮತ್ತು ಸ್ವರಾತ್ಮಗುರುಕುಲದ SwaratmaGurukula ಮೂಲಕಎಲ್ಲ ಭಾರತೀಯ ಕಲೆಗಳ ಸಂರಕ್ಷಣೆಮತ್ತು ಪೋಷಣೆಯೇ ಪ್ರಧಾನಅಪೇಕ್ಷೆಯಾಗಿದೆ ಎಂದು ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯಗುರುದೃಷ್ಟಿ ಸಭಾಭವನದಲ್ಲಿ ಎರಡುದಿನ ಆಯೋಜಿತವಾದ ಸ್ವರಾತ್ಮಗುರುಕುಲಮ್‌ದ ಸ್ವರವರ್ಷ ವರ್ಧಂತಿಉತ್ಸವದ ದಿವ್ಯ ಸಾನ್ನಿಧ್ಯ ವಹಿಸಿಅವರು ಆಶೀರ್ವಾದ ನೀಡಿದರು.
ವರ್ಷಅಂದರೆ ಮಳೆ.ಗರಿಷ್ಠವಾಗಿಆರು ತಿಂಗಳು ಮಳೆ ಸುರಿಯುತ್ತದೆ.ಆದರೆ,ವಿಶ್ವವಿದ್ಯಾಪೀಠದಲ್ಲಿವರ್ಷದ ಪ್ರತಿ ದಿನವೂ ಸ್ವರದ ಮಳೆಸುರಿಯುವಂತಾಗಬೇಕು.ಇದರಿಂದಎಲ್ಲ ದಿನವೂ ಸ್ವರವರ್ಷವೇ ಆಗುವಮುಖೇನ ಕಲೆಗಳ ರಕ್ಷಣೆ ಮತ್ತುಪೋಷಣೆಯಾಗುತ್ತದೆ ಎಂದರು.
ಸ್ವರವರ್ಷವರ್ಧಂತಿ ಉತ್ಸವವನ್ನು ಉದ್ಘಾಟಿಸಿದಖ್ಯಾತ ಹಿಂದುಸ್ತಾನಿ ಗಾಯಕ ಪಂ.ಪರಮೇಶ್ವರಹೆಗಡೆ ಸ್ವರಾತ್ಮ ಗುರುಕುಲಉತ್ಸಾಹಿ ಕಲಾರಾಧಕರ ನೇತೃತ್ವದಲ್ಲಿದೆ.ಇದರಿಂದಾಗಿಉತ್ತಮ ಕಾರ್ಯ ನಿರ್ವಹಣೆಗೆಕಾರಣವಾಗಿದೆ.ಸ್ವರಾತ್ಮಗುರುಕುಲದಿಂದ ಶ್ರೀಗಳ ಸಂಕಲ್ಪಸಾಕಾರವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆವಹಿಸಿದ್ದ ಡಿ.ಡಿ.ಶರ್ಮಾಮಾತನಾಡಿದರು.ಇದೇವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.ವರ್ಧಂತಿವಿಶೇಷವಾಗಿ ಪಂ.ಪರಮೇಶ್ವರಹೆಗಡೆ ಮತ್ತು ಪಂ.ದತ್ತಾತ್ರೇಯಗಾಂವ್ಕರ್ ಅವರಿಂದ ಗಾಯನಪ್ರಸ್ತುತವಾಯಿತು.
ಗೋಪಾಲಕೃಷ್ಣಹೆಗಡೆ ತಬಲಾ,ಡಾ.ಹರೀಶಹೆಗಡೆ ಹಾರ್ಮೋನಿಯಂ,ಶ್ರೀಧರಹೆಗಡೆ ಕಲಭಾಗ ಮತ್ತು ಕವಿತಾ ಹೆಗಡೆತಂಬೂರಾ ಸಾಥ್ ನೀಡಿದರು.ವೇದಿಕೆಯಲ್ಲಿವಿದ್ಯಾ ಪರಿಷತ್ ಸಂಯೋಜಕ ಡಾ.ಜಿ.ಎಲ್.ಹೆಗಡೆ,ಅಶೋಕಲೋಕದ ಸಂಯೋಜಕ ಮಂಜುನಾಥ ಸುವರ್ಣಗದ್ದೆ,ಇತರರುಉಪಸ್ಥಿತರಿದ್ದರು.
ಸ್ವರಾತ್ಮಗುರುಕುಲಮ್ ಪ್ರಾಚಾರ್ಯ ಡಾ.ಹರೀಶಹಗಡೆ ದಂಪತಿ ಸಭಾಪೂಜೆ ನೆರವೇರಿಸಿದರು.ಕವಿತಾಹರೀಶ ಹೆಗಡೆ ವರದಿ ವಾಚಿಸಿದರು.ಶಿಕ್ಷಕಶೇಷಾದ್ರಿ ಅಯ್ಯಂಗಾರ್ ವಂದಿಸಿದರು.ಸುಧನ್ವಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಗುರುಕುಲಮ್‌ನ50ಕ್ಕೂಹೆಚ್ಚಿನ ವಿದ್ಯಾರ್ಥಿಗಳಿಂದವಿವಿಧ ವಾದ್ಯಗಳೊಂದಿಗೆ ಸಂಗೀತಕಾರ್ಯಕ್ರಮ ಸಂಪನ್ನವಾಯಿತು..