ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಳ ನಿರ್ದೇಶಕ ವಿನೋದ ಕುಮಾರ್ ಮಾತನಾಡಿ, ಕೈಗಾದಲ್ಲಿ ಸದ್ಯ 220 ಮೆಗಾವಾಟ್‌ನ 4 ಘಟಕಗಳಿವೆ. ಇದುವರೆಗೆ 1.33 ಲಕ್ಷ ಮಿಲಿಯನ್ ಯೂನಿಟ್ ವಿದ್ಯುತ್‌ನ್ನು ದೇಶಕ್ಕೆ ನೀಡಿದೆ 1 ನೇ ಘಟಕಕ್ಕೆ 25 ವರ್ಷ ಕಳೆದಿದ್ದು, ಉತ್ಪಾದನೆ ಸ್ಥಗಿತ ಮಾಡಿ, ಕೂಲಂಟ್ ಹಾಗೂ ಚಾನಲ್ ಫೀಡರ್ ಬದಲಿಸುವ ಕಾರ್ಯ ನಡೆದಿದೆ. ಇದೇ ಅಕ್ಟೋಬರ್ ವೇಳೆಗೆ ಮರು ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲಿದೆ. ನವೀಕರಣದಿಂದ ಘಟಕದ ಆಯಸ್ಸು ಇನ್ನೂ 30 ವರ್ಷ ವೃದ್ಧಿಸಲಿದೆ ಎಂದರು.