ಮುಂಡಗೋಡ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂದಿಂದ ಬಿಇಒ ಸುಮಾ ಜಿ. ಅವರಿಗೆ ಮನವಿ ಸಲ್ಲಿಸಿದರು. ಎಸ್.ಡಿ. ಮುಡೆಣ್ಣವರ, ವಿಜಯಕುಮಾರ ಬಿ.ಎ., ಗಿರೀಶ ಕುಲಕಣಿರ್, ವಿ.ವಿ. ಮಲ್ಲನಗೌಡ್ರ, ಎಸ್.ಎನ್. ಸವದತ್ತಿ, ಇತರರಿದ್ದರು.
ಮುಂಡಗೋಡ: ತಾಲೂಕಿನ ಅನುದಾನಿತ ಪ್ರೌಢಶಾಲೆಗಳ ಸುಮಾರು 5 ಕಿಮೀ ವ್ಯಾಪ್ತಿಯೊಳಗೆ ಹೊಸ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆರಂಭಿಸದಂತೆ ಹಾಗೂ ಈಗಾಗಲೇ ಪ್ರಸ್ತಾಪಿಸಿರುವ ಶಾಲೆಗಳನ್ನು ಮರುಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂದಿಂದ ೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಕ್ರಮದಿಂದ ಅನುದಾನಿತ ಶಾಲೆಗಳು, ವಿದ್ಯಾಥಿರ್ಗಳ ದಾಖಲಾತಿಯಲ್ಲಿ ಗಣನೀಯ ಕುಸಿತವಾಗುವ ಸಾಧ್ಯತೆಯಿದ್ದು, ಶಾಲೆಗಳು ಅಸ್ತಿತ್ವ, ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಶಿಕ್ಷಕರು ಹಾಗೂ ಸಿಬ್ಬಂದಿಯ ಸೇವಾ ಭದ್ರತೆಯ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಸರ್ಕಾರವು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿ, ವಿದ್ಯಾಥಿರ್ಗಳ ಶೈಕ್ಷಣಿಕ ಭವಿಷ್ಯ ಹಾಗೂ ಸಾರ್ವಜನಿಕ ಹಣದ ಸಮರ್ಪಕ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಶಾಲೆಗಳ ಸ್ಥಾಪನೆ ಕುರಿತು ಸಮಗ್ರ ಮರುಪರಿಶೀಲನೆ ನಡೆಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಪ್ರಸ್ತಾಪಿಸಿರುವ ಪಾಳಾ, ಇಂದೂರ, ಉಗ್ಗಿನಕೇರಿ, ಅಂದಲಗಿ ಶಾಲೆಗಳಲ್ಲಿ ಸರ್ಕಾರ ಕೆಪಿಎಸ್ಗಳನ್ನು ತೆರೆಯುತ್ತಿದ್ದು, ಈ ಕುರಿತು ಮರುಪರಿಶೀಲನೆ ನಡೆಸಿ, ಕೆಪಿಎಸ್ಗಳನ್ನು ತೆರೆಯದಂತೆ ಆದೇಶ ಹೊರಡಿಸಲು ಇಲಾಖೆಯನ್ನು ಒತ್ತಾಯಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿಕ್ಷಕ ಎಸ್.ಡಿ. ಮುಡೆಣ್ಣವರ, ವಿಜಯಕುಮಾರ ಬಿ.ಎ., ಗಿರೀಶ ಕುಲಕಣಿರ್, ವಿ.ವಿ. ಮಲ್ಲನಗೌಡ್ರ, ಎಸ್.ಎನ್. ಸವದತ್ತಿ, ಶರಣಪ್ಪ ಜಡೆದಲಿ ಸೇರಿದಂತೆ ತಾಲೂಕಿನ ವಿವಿಧ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.