9 ನೇ ತರಗತಿಗೆ ಶಾಲೆ ಬಿಟ್ಟ ಶಿರಸಿ ಬನವಾಸಿ ರಸ್ತೆಯ ಇದ್ರೀಸ್ ಗೌಂಡಿ ಕೆಲಸ ಮಾಡಿಕೊಂಡಿದ್ದ. ಆದರೆ, ಭಯೋತ್ದಾದಕ ಚಟುವಟಿಕೆಗೆಗೆ ಸ್ಲೀಪರ್ ಸೆಲ್‌ನಂತೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಲ್ತಾಲ್ ಅಲ್ ರಾಥರ್, ತಾನಿಯಾ ಫರ್ವೀನ್ ಎಂಬುವವರ ಜೊತೆ ಸೇರಿಕೊಂಡು ಲಷ್ಕರ್‌ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇಲ್ಲಿಂದಲೇ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಭಾರತ ಸರ್ಕಾರದ ವಿರುದ್ಧ ಜಿಹಾದ್ ನಡೆಸುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ. 2021 ರಲ್ಲಿ ಎನ್‌ಐಎ ಈ ಎಲ್ಲ ಅಂಶಗಳ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.