ಹೊಸ ವರ್ಷಕ್ಕೆ ಗೋವಾಕ್ಕೆ ಬರುವವರಿಗೆ ಇಲ್ಲಿದೆ ಮಾಹಿತಿ

ರೈಲು
ರೈಲು
Published on
ಕಾರವಾರ: ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಮುಂಬೈನಿAದ ಮಂಗಳೂರು ಹಾಗೂ ತಿರುವನಂತಪುರMಗೆ ರೈಲು ಓಡಾಡಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ಹಾಗೂ ತಿರುವನಂತಪುರA ನಾರ್ತ್ ನಡುವೆ ವಿಶೇಷ ರೈಲು 01171 ಡಿಸೆಂಬರ್ 18, 25 ರಂದು 2026 ರ ಜನವರಿ 1 ಮತ್ತು 8 ರಂದು ಓಡಲಿದೆ. ಸಾಯಂಕಾಲ 4 ಗಂಟೆಗೆ ಮುಂಬೈ ಬಿಡುವ ರೈಲು ಮರುದಿನ ರಾತ್ರಿ 11.30 ಕ್ಕೆ ತಿರುವನಂತಪುರA ನಾರ್ತ್ ಸ್ಟೇಷನ್ ತಲುಪಲಿದೆ.
ತಿರುವನಂತಪುರAನಿAದ ಡಿಸೆಂಬರ್ 20, 27 ಹಾಗೂ 2ಜನವರಿ 3 ಮತ್ತ 10 ರಂದು ಮಧ್ಯಾಹ್ನ 4.20 ಕ್ಕೆ ತಿರುವನಂತಪುರA ನಾರ್ತ್ನಿಂದ ಹೊರಡುವ 01172 ರೈಲು ಎರಡನೆ ದಿನ ರಾತ್ರಿ 1 ಗಂಟೆಗೆ ಮುಂಬೈ ತಲುಪಲಿದೆ. ಜಿಲ್ಲೆಯ ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ ಹಾಗೂ ಭಟ್ಕಳದಲ್ಲಿ ರೈಲು ನಿಲ್ಲಲಿದೆ. ಇದಲ್ಲದೇ ಮುಂಬೈ ಹಾಗೂ ಗೋವಾ ಕರ್ಮಲಿ ನಡುವೆಯೂ ರೈಲು ಬಿಡಲಾಗುತ್ತಿದೆ.
ಮಾತ್ರವಲ್ಲ ಮುಂಬೈ-ಮAಗಳೂರು ನಡುವೆಯೂ ವಿಶೇಷ ರೈಲು ಓಡಿಸಲಾಗುತ್ತಿದೆ. ಡಿಸೆಂಬರ್ 16, 23, 30 ಹಾಗೂ 2026 ಜನವರಿ 6 ರಂದು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಮಧ್ಯಾಹ್ನ 4 ಗಂಟೆಗೆ ಹೊರಡುವ ವಿಶೇಷ ರೈಲು 01185 ಮರುದಿನ ಬೆಳಗ್ಗೆ 10.05 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ತಲುಪಲಿದೆ.
ಡಿಸೆಂಬರ್ 17, 24, 31 ಹಾಗೂ ಜನರವರಿ 7 ರಂದು ಮಂಗಳೂರು ಜಂಕ್ಷನ್‌ನಿAದ ಮಧ್ಯಾಹ್ನ 1 ಗಂಟೆಗೆ ಹೊರಡುವ ವಿಶೇಷ ರೈಲು 01186 ಮರುದಿನ ಬೆಳಗ್ಗೆ 6.50 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ. ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ ಹಾಗೂ ಭಟ್ಕಳದಲ್ಲಿ ರೈಲು ನಿಲ್ಲಲಿದೆ.
ನಾಗರಕೊಯ್ಲ್ -ಮಡಗಾಂವ ಜಂಕ್ಷನ್ ನಡುವೆ ಡಿಸೆಂಬರ್ 23 ಹಾಗೂ 2026 ರ ಜನವರಿ 6 ರಂದು ರೈಲು ( 06083 ) ಸಂಚರಿಸಲಿದೆ. ಮಧ್ಯಾಹ್ನ 11.40 ಕ್ಕೆ ನಾಗರಕೊಯ್ಲ್ ಬಿಡುವ ರೈಲು ಮರುದಿನ ಬೆಳಗ್ಗೆ 8.50 ಕ್ಕೆ ಮಡಗಾಂವ ತಲುಪಲಿದೆ. 06084 ರೈಲು ಡಿಸೆಂಬರ್ 24 ಮತ್ತು ಜನವರಿ 7 ರಂದು ಬೆಳಗ್ಗೆ 10.15 ಕ್ಕೆ ಮಡಗಾಂವ ಜಂಕ್ಷನ್‌ನಿAದ ಬಿಡಲಿದ್ದು, ಮರುದಿನ ಬೆಳಗ್ಗೆ 11 ಗಂಟೆಗೆ ನಾಗರಕೊಯ್ಲ್ ಜಂಕ್ಷನ್ ತಲುಪಲಿದೆ. ಜಿಲ್ಲೆಯ ಮುರ್ಡೇಶ್ವರ, ಕುಮಟಾ ಮತ್ತು ಕಾರವಾರದಲ್ಲಿ ನಿಲುಗಡೆ ಇದೆ.
ತಿರುವನಂತಪುರA-ಚAಢೀಗಢ ವಿಶೇಷ ರೈಲು (06192 ) ಕೊಂಕಣ ರೈಲ್ವೆ ಮಾರ್ಗದಲ್ಲಿ ಓಡಾಡಲಿದೆ.ಡಿ.10 ರಂದು ಬೆಳಗ್ಗೆ 7.45 ಕ್ಕೆ ತಿರುವನಂತಪುರA ಬಿಡುವ ರೈಲು ನಾಲ್ಕನೇ ದಿನ ಬೆಳಗ್ಗೆ 4 ಗಂಟೆಗೆ ಚಂಡೀಗಢ ತಲುಪಲಿದೆ. ರೈಲು ಕಾರವಾರದಲ್ಲಿ ಮಾತ್ರ ನಿಲ್ಲಲಿದೆ.
..............
ಬಾಕ್ಸ್----
ಬೆಂಗಳೂರಿನಿAದ ಗೋವಾಕ್ಕೆ ರೈಲು
ಕ್ರಿಸ್‌ಮಸ್ ಅಂಗವಾಗಿ ಬೆಂಗಳೂರಿನಿAದ ಗೋವಾಕ್ಕೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರಿನ ಯಶವಂತಪುರ ಹಾಗೂ ವಾಸ್ಕೋ ನಡುವೆ ಡಿಸೆಂಬರ್ 25, ಡಿಸೆಂಬರ್ 31 ಹಾಗೂ 2026 ರ ಜನವರಿ 1 ರಂದು ವಿಶೇಷ ರೈಲುಗಳನ್ನು ನೈರುತ್ಯ ರೈಲ್ವೆಯಿಂದ ಓಡಿಸಲಾಗುತ್ತಿದೆ.
ಡಿಸೆಂಬರ್ 25 ಹಾಗೂ 31 ರಂದು ರಾತ್ರಿ 12.20 ಕ್ಕೆ ಯಶವಂತಪುರ ಬಿಡಲಿರುವ ರೈಲು (06505)ಮರುದಿನ ಮಧ್ಯಾಹ್ನ 1.50 ಕ್ಕೆ ವಾಸ್ಕೋ ತಲುಪಲಿದೆ. ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಅಳ್ನಾವರ ಕ್ಯಾಸಲ್‌ರಾಕ್ ಮೂಲಕ ವಾಸ್ಕೋ ತಲುಪಲಿದೆ. ದೂದ್‌ಸಾಗರ ಜಲಪಾತ ಹಾಗೂ ಪಶ್ಚಿಮಘಟ್ಟದ ಸಾಲುಗಳಲ್ಲಿ ಸಾಗುವ ವಿಶಿಷ್ಟ ಅನುಭವ ಸಿಗಲಿದೆ.
ವಾಸ್ಕೋ-ಯಶವಂತಪುರ ರೈಲು (06506) ಡಿಸೆಂಬರ್ 25 ಹಾಗೂ ಜನವರಿ 1 ರಂದು ಸಾಯಂಕಾಲ 5 ಗಂಟೆಗೆ ವಾಸ್ಕೋ ಬಿಟ್ಟು ಮರುದಿನ ಬೆಳಗ್ಗೆ 9.39 ಕ್ಕೆ ಬೆಂಗಳೂರು ತಲುಪಲಿದೆ.
.........
ಕಾಬ್ಸ್----
ಕಾರವಾರ-ಯಶವಂತಪುರ
ಯಶವಂತಪುg-ಕಾರವಾರÀ(06267) ಹಗಲು ರೈಲನ್ನು ಡಿಸೆಂಬರ್ 24 ಹಾಗೂ 27 ರಂದು ಓಡಿಸಲಾಗುತ್ತಿದೆ. ಎರಡೂ ದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಡುವ ರೈಲು ಮರುದಿನ ಬೆಳಗ್ಗೆ 6.10 ಕ್ಕೆ ಕಾರವಾರ ತಲುಪಲಿದೆ.
ಕಾರವಾರ-ಯಶವಂತಪುರ (06268) ರೈಲು ಡಿಸೆಂಬರ್ 25 ಹಾಗೂ 28 ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರ ಬಿಟ್ಟು ಮರುದಿನ ಬೆಳಗಿನಜಾವ 4.30 ಕ್ಕೆ ಯಶವಂತಪುರ ತಲುಪಲಿದೆ. ಇದು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಬಂಟ್ವಾಳ ಮೂಲಕ ಸಾಗಿ ಸುರತ್ಕಲ್ ಸಮೀಪ ಕೊಂಕಣ ರೈಲ್ವೆ ಮಾರ್ಗ ಸೇರಿ ಕಾರವಾರದೆಡೆ ಸಂಚರಿಸಲಿದೆ. ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ಹಾಗೂ ಅಂಕೋಲಾ ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
..........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net