ಸಾಣೆಕಟ್ಟೆ(sanekate) ಯಲ್ಲಿ ವರ್ಷದ ಹೊಸ ಉಪ್ಪು ಉತ್ಪಾದನೆ
ಗೋಕರ್ಣದ ಸಾಣೆಕಟ್ಟೆಯ ನಾಗರಬೈಲ್ ಸಂಘದಲ್ಲಿ ಉತ್ಪಾದನೆಗೊಂಡ ವರ್ಷದ ಹೊಸ ಉಪ್ಪು ಶೇಖರಣೆಗೆ ಅಧ್ಯಕ್ಷ ಅರುಣ ನಾಡ್ಕರ್ಣಿ ಚಾಲನೆಯಿತ್ತರು.ಮುದ್ದಣ್ಣ ನಾಯ್ಕ,ಅನಿಲ ನಾಡ್ಕರ್ಣಿ,ವೇ.ರವಿಕಿರಣ ಭಟ್ಟ,ದುರ್ಗೇಶ ಕಾಗಾಲ,ನವೀನ ನಾಡ್ಕರ್ಣಿ ಇತರರಿದ್ದರು.
Published on:
Copied
Follow Us
ಗೋಕರ್ಣ:ನೈಸರ್ಗಿಕ ಉಪ್ಪು ಉತ್ಪಾದನೆಗೆ ಖ್ಯಾತವಾದ ಇಲ್ಲಿನ ಸಾಣೆಕಟ್ಟೆ(sanekate)ಯ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘದ ನಾರಣಾಪುರ ಘಟಕದಲ್ಲಿ ಉತ್ಪಾದನೆಯಾದ ವರ್ಷದ ಹೊಸ ಉಪ್ಪು ಶೇಖರಣೆಗೆ ಸಂಘದ ಅಧ್ಯಕ್ಷ ಅರುಣ ನಾಡ್ಕರ್ಣಿ ಶುಭಾರಂಭಗೈದರು.
ಮುನ್ನೂರು ವರ್ಷಕ್ಕೂ ಹೆಚ್ಚಿನ ಉಪ್ಪು ಬೆಳೆಯ ಇತಿಹಾಸ ಪಡೆದಿರುವ ಈ ಸಂಸ್ಥೆ 1993ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ವೈಜ್ಞಾನಿಕವಾಗಿ ಅಯೋಡಿನ್‌ಯುಕ್ತ ಉಪ್ಪು ಸಿದ್ಧಪಡಿಸಿದ ದಾಖಲೆ ಹೊಂದಿದೆ.
ವರ್ತಮಾನದ ಮಾರ್ಕೆಟ್ ಪೈಪೋಟಿ ನಡುವೆಯೂ ನಿಸರ್ಗದತ್ತವಾದ ಇಲ್ಲಿನ ಕಂದು ವರ್ಣದ ಉಪ್ಪಿಗೆ ಶತಮಾನಗಳಿಂದಲೂ ಜಿಲ್ಲೆ ಸೇರಿದಂತೆ ಸನಿಹದ ಅನೇಕ ಜಿಲ್ಲೆಗಳಲ್ಲಿ ಇವತ್ತಿಗೂ ಉತ್ತಮ ಬೇಡಿಕೆ ಇರುವುದು ಸಾಣೆಕಟ್ಟೆ ಉಪ್ಪು ಉಳಿಸಿಕೊಂಡು ಬಂದಿರುವ ಪ್ರಖ್ಯಾತಿಗೆ ಸಾಕ್ಷಿಯಾಗಿದೆ.
ವೇ.ರವಿಕಿರಣ ಭಟ್ಟ ಮೊದಲ ಉಪ್ಪು ಬೆಳೆಗೆ ಪೂಜೆ ಸಲ್ಲಿಸಿದರು.
ಸಂಘದ ನಿರ್ದೇಶಕ ಮುದ್ದಣ್ಣ ನಾಯ್ಕ, ಕಾರ್ಯದರ್ಶಿ ಅನಿಲ ನಾಡ್ಕರ್ಣಿ, ಮೇಲ್ವಿಚಾರಕ ದುರ್ಗೇಶ ಕಾಗಾಲ, ನವೀನ ನಾಡ್ಕರ್ಣಿ, ಕೇಂದ್ರ ಉಪ್ಪಿನ ಇಲಾಖೆ ಸಿಬ್ಬಂದಿ ಶ್ರೀನಿವಾಸ ನಾಯ್ಕ, ಸಂಘದ ನಿವೃತ್ತ ಅಧಿಕಾರಿ ಚಂದ್ರಶೇಖರ ನಾಯಕ ಮತ್ತು ಸಿಬ್ಬಂದಿ ಹಾಜರಿದ್ದರು.