ಮುಂಡಗೋಡ: ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಮುಂಡಗೋಡನಿಂದ ಮುಡಸಾಲಿ ಗ್ರಾಮಕ್ಕೆ ಸೋಮವಾರ ನೂತನ ಬಸ್ (Bus) ಸಂಚಾರ ಆರಂಭವಾಯಿತು..ಮುಂಡಗೋಡನಿಂದ ಕಾವಲಕೊಪ್ಪ ಚಿಗಳ್ಳಿ ಮಾರ್ಗವಾಗಿ ಮುಡಸಾಲಿಯಿಂದ ಕಾತುರವರೆಗೆ ಹೋಗಿ ಮರಳಿ ಅದೇ ಮಾರ್ಗವಾಗಿ ಬಸ್ ಹಿಂದಿರುಗಲಿದೆ. .ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬೆಳಗ್ಗೆ ಹಾಗೂ ಸಂಜೆ ಎರಡು ಅವಧಿಯಲ್ಲಿಯೂ ಬಸ್ ಸಂಚರಿಸಲಿದೆ. .ನೂತನ ಬಸ್ ಸಂಚಾರಕ್ಕೆ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ ಚಾಲನೆ ನೀಡಿದರು..ಮುಖಂಡರಾದ ಕೃಷ್ಣ ಹಿರಳ್ಳಿ, ನಿತಿನ್‌ರಾಯ್ಕರ್, ಹನುಮಂತ ವಡ್ಡರ, ರಾಮಕೃಷ್ಣ ಮೂಲಿಮನಿ, ಗಂಗಾಧರ ಹಿರೇಮಠ, ಶಂಕರ ಲಕ್ಮಾಪುರ, ಅಶೋಕ ಮುಸ್ಯಾನವರ, ಮಾರುತಿ ಆಲಳ್ಳಿ, ಮಂಜು ಕಳಸಾಪುರ, ವಿರುಪಾಕ್ಷಿ ಮತ್ತಿತರರಿದ್ದರು.