ಮೂಢ ನಂಬಿಕೆ ಪ್ರಶ್ನಿಸಿದ ನಾರಾಯಣ ಗುರುಗಳು

ಕಾರವಾರದಲ್ಲಿ ನಾರಾಯಣಗುರು ಜಯಂತಿ ನಡೆಯಿತು.
ಕಾರವಾರದಲ್ಲಿ ನಾರಾಯಣಗುರು ಜಯಂತಿ ನಡೆಯಿತು.
Published on

ಮೂಢನಂಬಿಕೆ, ಜಾತಿ ತಾರತಮ್ಯ ಹಾಗೂ ಅನಾವಶ್ಯಕ ಆಚರಣೆಗಳನ್ನು ಪ್ರಶ್ನಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರು ಶಿಕ್ಷಣ ಮತ್ತು ವೈಚಾರಿಕತೆಯ ಮೂಲಕ ಸಮಾಜವನ್ನು ಮುನ್ನಡೆಸಲು ಕರೆ ನೀಡಿದರು ಎಂದು ಶಿರಸಿಯ ವೆಂಕಟರಾವ್ ನಿಲೇಕಣಿ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ರಾಜ್ಯಶಾಸ್ತç ಉಪನ್ಯಾಸಕ ಉಮೇಶ ನಾಯ್ಕ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದರು.
ದೇವರನ್ನು ಹೊರಗೆ ಹುಡುಕುವುದಕ್ಕಿಂತ ಮನುಷ್ಯನ ಪ್ರಾಮಾಣಿಕತೆ, ಕರ್ತವ್ಯ ಮತ್ತು ಉತ್ತಮ ಕಾರ್ಯಗಳಲ್ಲಿ ದೈವತ್ವವನ್ನು ಕಾಣುವ ಚಿಂತನೆ ಬೆಳೆಸಿದರು ಎಂದು ಹೇಳಿದವರು ನಾರಾಯಣ ಗುರುಗಳು ಎಂದರು.
ನಿವೃತ್ತ ಮುಖ್ಯಾಧ್ಯಾಪಕ ಪ್ರದೀಪ ಶ್ರೀಪಾದ ರಾಣೆ, ನುಲಿಯ ಚಂದಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿ, ನುಲೀಯ ಚಂದಯ್ಯನವರು ಕೆರೆಯ ದಂಡೆಯಲ್ಲಿ ಬೆಳೆಯುತ್ತಿದ್ದ ಹುಲ್ಲನ್ನು ಕೊಯ್ದು, ಅದರಿಂದ ಹಗ್ಗ ಹೊಸೆದು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದರು. ಆ ಕಾಯಕದಿಂದ ಬಂದ ಆದಾಯದಿಂದ ಶರಣರಿಗೆ ಮತ್ತು ಹಸಿದವರಿಗೆ ದಾಸೋಹ ಮಾಡುತ್ತಿದ್ದರು. ಯಾವುದೇ ಕಾಯಕ ಸಣ್ಣದಲ್ಲ, ಪ್ರತಿಯೊಂದು ವೃತ್ತಿಯೂ ಪವಿತ್ರವಾದದ್ದು. ಆಡಂಬರ ಮತ್ತು ಆಸೆಯಿಲ್ಲದೆ ಮಾಡುವ ಪ್ರಾಮಾಣಿಕ ದುಡಿಮೆಯೇ ಶಿವಸೇವೆ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ತಹಸೀಲ್ದಾರ ನಿಶ್ಚಲ್ ನರೋನಾ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಂಜೀವ ಕುಮಾರ, ನಾಮದಾರಿ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಸುನೀಲ್ ಸೋನಿ, ಪ್ರಧಾನ ಕಾರ್ಯದರ್ಶಿ ಮಾಧವ ನಾಯ್ಕ, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ರಾಮಾನಾಯ್ಕ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ ಸ್ವಾಗತಿಸಿದರು. ವನೀತಾ ಶೆಟ್ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net