ಪ್ರಸ್ತುತ 'ಶ್ರೀ ಇಡುಗಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ'ಯ ನರ‍್ದೇಶಕರಾಗಿರುವ ಇವರು, ಅಪ್ರತಿಮ ಯಕ್ಷಗಾನ ಕಲಾವಿದರೂ ಹೌದು. ಶ್ರೀಕೃಷ್ಣ ಸಂಧಾನದ ಕೃಷ್ಣ, ಗದಾಯುದ್ಧದ ದರ‍್ಯೋಧನ,ಭೀಮ, ವಾಲಿ ಮೋಕ್ಷದ ವಾಲಿ, ರಾಮ ಮಾತ್ರವಲ್ಲದೆ ದ್ರೌಪದಿ, ರುಕ್ಮಿಣಿಯಂತಹ ಸ್ತ್ರೀ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಅವರು ರಚಿಸಿದದ ಪಂಚವಟಿ, ಸೀತಾಪಹರಣ, ಚಕ್ರವ್ಯೂಹ ಮುಂತಾದ ಪ್ರಸಂಗಗಳು ವಿರ‍್ಶಕರ ಶ್ಲಾಘನೆಗೆ ಪಾತ್ರವಾಗಿವೆ. ಅಮೆರಿಕ, ಇಂಗ್ಲೆಂಡ್, ಸ್ಪೇನ್, ಚೀನಾ, ಸಿಂಗಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಯಕ್ಷಗಾನ ಪ್ರರ‍್ಶನ ನೀಡಿ ಕರಾವಳಿಯ ಕಲೆಯನ್ನು ಜಾಗತಿಕ ವೇದಿಕೆಯಲ್ಲಿ ಮಿನುಗಿಸಿದ್ದಾರೆ.