ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ, ತಾಲೂಕಿನ ಬಾಚಣಕಿಯಲ್ಲಿ 1976 ರ ಅವಽಯಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಅದಕ್ಕಾಗಿ ಕಾಲುವೆ ನಿರ್ಮಿಸಿ ರೈತರಿಗೆ ಕೃಷಿಗೆ ನೀರು ಒದಗಿಸಲಾಗುತ್ತಿದೆ. ಬಾಚಣಕಿ, ಮಜ್ಜಿಗೇರಿ, ಕೊಪ್ಪ, ಇಂದೂರು, ಕೂಸುರು, ಹುನಗುಂದ, ನಂದಿಕಟ್ಟಾ ಗ್ರಾಮಗಳ ಸುಮಾರು 2000 ಎಕರೆಗೆ ಇದೇ ಜಲಾಶಯದಿಂದ ನೀರು ಒದಗಿಸಲಾಗುತ್ತಿದೆ. ಈ ನೀರನ್ನು ನಂಬಿ ಸುಮಾರು 2 ಸಾವಿರಕ್ಕೂ ಅಧಿಕ ರೈತರು ಅಡಿಕೆ, ಬಾಳೆ, ಕಬ್ಬು, ಬೆಳೆಯುತ್ತಿದ್ದಾರೆ.