crocodile : ಒಂದು ಮೊಸಳೆಗೆ 40ಕ್ಕೂ ಅಧಿಕ ಮರಿ

ದಾಂಡೇಲಿಯ ಲೋಕೋಪಯೋಗಿ ಪ್ರವಾಸಿ ಗೃಹದ ಹತ್ತಿರತಾಯಿ ಮೊಸಳೆ (crocodile) ಮತ್ತು ಮರಿಗಳು.
ದಾಂಡೇಲಿಯ ಲೋಕೋಪಯೋಗಿ ಪ್ರವಾಸಿ ಗೃಹದ ಹತ್ತಿರತಾಯಿ ಮೊಸಳೆ (crocodile) ಮತ್ತು ಮರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ದಾಂಡೇಲಿ ಪ್ರವಾಸಿ ಗೃಹದ ಹತ್ತಿರ ಪತ್ತೆ
  • ಉಸುಕಿನ ಪ್ರದೇಶದಲ್ಲಿ ಗವಿಯಾಕಾರದ ಸ್ಥಳದಲ್ಲಿ ಮರಿಗಳ ಓಡಾಟ
  • ಮೊಸಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ
ದಾಂಡೇಲಿ: ಪಟ್ಟಣದ ಲೋಕೋಪಯೋಗಿ ಪ್ರವಾಸಿ ಗೃಹದ ಹತ್ತಿರ ಬೃಹದ್ದಾಕಾರದ ಹೆಣ್ಣು ಮೊಸಳೆಯೊಂದು ಸುಮಾರು 40ಕ್ಕೂ ಹೆಚ್ಚು ಮೊಟ್ಟೆಗಳನ್ನ ಇಟ್ಟು ಮರಿಯೊಡೆದ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ.
ಈ ಮೊಸಳೆ (crocodile) ಎರಡು ತಿಂಗಳ ಹಿಂದೆ ಈ ದಂಡೆಯ ಉಸುಕಿನ ಪ್ರದೇಶದಲ್ಲಿ ಗವಿಯಾಕಾರದ ಸ್ಥಳವನ್ನು ಮಾಡಿಕೊಂಡು ಇಲ್ಲಿ ಮೊಟ್ಟೆ ಇಡಲಾರಂಭಿಸಿತ್ತು. ಇದೀಗ ಎರಡು ತಿಂಗಳ ನಂತರ ಆ ಮೊಟ್ಟೆಗಳು ಒಡೆದು ಮರಿಗಳಾಗಿ ಹೊರ ಬಂದಿವೆ. ನದಿ ದಂಡೆಯ ಪ್ರದೇಶದಲ್ಲಿ ಮೊಸಳೆ ಮರಿಗಳು ಓಡಾಡಿಕೊಂಡಿರುವುದು ಕಂಡುಬರುತ್ತಿದೆ. ಜನರ ಸದ್ದು ಆಗುತ್ತಿದ್ದಂತೆಯೇ ಅವು ಒಳಗಡೆ ಸೇರಿಕೊಳ್ಳುತ್ತವೆ. ತಾಯಿ ಮೊಸಳೆಯ ಮೈ ಮೇಲೆ ಏರಿಕೊಳ್ಳುತ್ತವೆ. ತಾಯಿ ಮೊಸಳೆ ಮಾತ್ರ ಆ ಸ್ಥಳವನ್ನು ಬಿಟ್ಟು ಎಲ್ಲೂ ಅಲ್ಲಾಡದೆ, ಅಲ್ಲಿ ಯಾರು ಮನುಷ್ಯರು ಹಾಗೂ ಪ್ರಾಣಿಗಳು ಬಾರದ ಹಾಗೆ ಕಣ್ಣಾವಲನ್ನು ಇಟ್ಟುಕೊಂಡು ಕಾಯುತ್ತಿರುವುದು ಸ್ಥಳಿಯರಲ್ಲಿ ಆತಂಕ ಹುಟ್ಟಿಸಿದೆ.
ದಾಂಡೇಲಿಯ ಲೋಕೋಪಯೋಗಿ ಪ್ರವಾಸಿ ಗೃಹದ ಹತ್ತಿರತಾಯಿ ಮೊಸಳೆ (crocodile) .

ಕೇವಲ ಒಂದು ಹೆಣ್ಣು ಮೊಸಳೆ 40 ಮೊಸಳೆ ಮರಿಗಳು ಹಾಕಿದರೆ ಕಾಳಿನದಿಯಲ್ಲಿರುವ ಉಳಿದ ಹೆಣ್ಣು ಮೊಸಳೆಗಳು ಮರಿಗಳು ಹಾಕಿದರೆ ವಷರ್ಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮೊಸಳೆ ಮರಿಗಳು ಹುಟ್ಟುಕೊಳ್ಳುತ್ತಿದ್ದು ಮೊಸಳೆ ಸಂಖ್ಯೆಯಲ್ಲಿ ಗಣನಿಯ ಏರಿಕೆಯಾಗುವುದರಲ್ಲಿ ಯಾವುದೆ ಅನುಮಾನವಿಲ್ಲ. ದಾಂಡೇಲಿಯಲ್ಲಿ ಮೊಸಳೆಗಳು ನದಿ ಬಿಟ್ಟು ಜನವಸತಿ ಪ್ರದೇಶದಲ್ಲಿ ಆಹಾರ ಹುಡುಕುತ್ತಾ ಬರುತ್ತಿರುವುದು ಇಗ ಸಾಮಾನ್ಯವಾಗಿದೆ. ಮೊಸಳೆ ದಾಳಿಗೆ ಇಗಾಗಲೆ 5 ಜನ ಸಾವನಪ್ಪಿದ್ದು, ಇನ್ನು ಹಲವರು ಮೊಸಳೆ ಬಾಯಿಯಿಂದ ತಪ್ಪಿಸಿಕೊಂಡಿದ್ದು ಇಲ್ಲಿ ನೆನಪಿಸಬಹುದು. ಯಾವುದೆ ಅಹಿತಕರ ಘಟನೆ ನಡೆಯುವ ಮುನ್ನವೆ ಸಂಬಂಧ ಪಟ್ಟ ಇಲಾಖೆಯವರಿಂದ ಮೊಸಳೆಗಳ (crocodile) ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ದೂರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net