ಬಂಧಿತ ಶಿಕ್ಷಕನ ವಿರುದ್ಧ ಮತ್ತಷ್ಟು ಆರೋಪ Arrested teacher

 Arrested teacher ಬಂಧಿತನಾಗಿರುವ ಕಿರಣ ಟೊಪೊಜಿ.
Arrested teacher ಬಂಧಿತನಾಗಿರುವ ಕಿರಣ ಟೊಪೊಜಿ.
Published on
ಮುಂಡಗೋಡ: ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿ ಪೊಲೀಸ್ ಅತಿಥಿಯಾಗಿರುವ Arrested teacher ಖಾಸಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ಕಿರಣ ನಿಂಗಪ್ಪ ಟೊಪೊಜಿ ಇನ್ನೂ ಅನೇಕ ಅಪ್ರಾಪ್ತ ಬಾಲಕಿಯರೊಂದಿಗೆ ಮೊಬೈಲ್ ಮೂಲಕ ಚಾಟಿಂಗ್ ನಡೆಸುತ್ತಿದ್ದನೆಂಬ ವಿಚಾರವೀಗ ತಾಲೂಕಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ.
ತಾಲೂಕಿನ ಮುಡಸಾಲಿ ಗ್ರಾಮದ ಕಿರಣ ನಿಂಗಪ್ಪ ಟೊಪೊಜಿ (31) ಈ ಹಿಂದೆ ಮುಂಡಗೋಡ ಪಟ್ಟಣದಲ್ಲಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದ. ಆ ಶಾಲೆಯಲ್ಲಿಯೂ ವಿದ್ಯಾರ್ಥಿಗಳೊಂದಿಗೆ ಗಲಾಟೆ ಮಾಡುತ್ತಿದ್ದ ಶಿಕ್ಷಕನನ್ನು ಶಾಲೆಯವರು ಕೆಲಸದಿಂದ ಬಿಡಿಸಿದ್ದರು ಎನ್ನಲಾಗಿದೆ.
ನಂತರ ಕರಗಿನಕೊಪ್ಪ ಖಾಸಗಿ ಶಾಲೆಗೆ ದೈಹಿಕ ಶಿಕ್ಷಕನಾಗಿ ಸೇರಿಕೊಂಡಿದ್ದ ಕಿರಣ ಅಲ್ಲಿಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದಾನೆ.
ಆದರೆ, ಶಿಕ್ಷಕ ಶಾಲೆಯ ಮತ್ತಷ್ಟು ಅಪ್ರಾಪ್ತ ಬಾಲಕಿಯರಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುವುದು ಹಾಗೂ ಪೋನ್ ಕರೆ ಮಾಡಿ ಮಾತನಾಡುತ್ತಿದ್ದ ಎಂಬ ವಿಚಾರ ಈಗ ಚರ್ಚೆಯ ವಿಷಯವಾಗಿದೆ. ಶಿಕ್ಷಕನಾದವನೇ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಘಟನೆ ಪಾಲಕರಲ್ಲಿ ಆತಂಕ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net