ಕುಮಟಾದ ಹೆಗಡೆ ಗ್ರಾಮದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾನುವಾರ ಗಂಗಾವಳಿ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರ ಎದುರೇ ಈ ವಿಚಾರ ಚರ್ಚೆಯಾಯಿತು. ಉತ್ತರ ಕನ್ನಡದ 6 ಕ್ಷೇತ್ರದಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಹೆಬ್ಬಾರ ಅವರನ್ನೂ ಸೇರಿ ಕಾಂಗ್ರೆಸ್ ಬಲ ಐದಕ್ಕೇರಿದೆ. ಈಗ ಜಿಲ್ಲೆಯಲ್ಲಿ ನೀವೊಬ್ಬರೇ ಬಿಜೆಪಿ ಶಾಸಕರಿದ್ದೀರಿ. ನೀವು ಕಾಂಗ್ರೆಸ್‌ಗೆ ಬನ್ನಿ ಎಂದು ಆಹ್ವಾನ ನೀಡಿದರು. ಆದರೆ, ಒಬ್ಬನೇ ನಿಂತು ಹೋರಾಡುವ ಶಕ್ತಿ ನನಗಿದೆ. ಬಿಜೆಪಿ ಬಿಟ್ಟು ನಾನು ಬರುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ `ನೀವು ಅಲ್ಲೇ ಇರಿ. ನಾವು ಯಾರನ್ನೂ ಆಹ್ವಾನಿಸುವುದಿಲ್ಲ' ಎಂದು ಹೇಳಿದರು ಎಂದು ಹೇಳಿಕೆ ನೀಡಿದರು.