ಮೀನುಗಾರರ ಸಂಕಷ್ಟ ಪರಿಹಾರ ನಿಧಿ ದುರುಪಯೋಗ

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮೀನುಗಾರರ ಮುಖಂಡರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮೀನುಗಾರರ ಮುಖಂಡರು ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಮೀನುಗಾರರ ವಿಭಾಗದಿಂದಲೇ ದೂರು
  • ಮೀನುಗಾರರ ಹಣ ಬೇರೆಯವರಿಗೆ ಪರಿಹಾರ
ಕಾರವಾರ:

ಮೀನುಗಾರರ ಸಂಕಷ್ಟ ಪರಿಹಾರ ನಿಧಿ ದುರುಪಯೋಗವಾಗುತ್ತಿದೆ ಎಂದು ಕಾಂಗ್ರೆಸ್‌ನ ಮೀನುಗಾರರ ವಿಭಾಗ ಆರೋಪಿಸಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ಮುಖಂಡರು, ವಿವಿಧ ಮೀನುಗಾರಿಕೆ ಸಂಘಟನೆಗಳ ಪ್ರಮುಖರ ಜೊತೆ ಶುಕ್ರವಾರ ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಗಣಪತಿ ಮಾಂಗ್ರೆ, ಜೀವನಕ್ಕಾಗಿ ಸಮುದ್ರಕ್ಕೆ ತೆರಳುವ ಹಲವು ಮೀನುಗಾರರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಅವರ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದೆ. ಮೀನುಗಾರರಿಗೆ ನೀಡುವ ಸಬ್ಸಿಡಿಯ ಸೀಮೆ ಎಣ್ಣೆ ಹಾಗೂ ಸಬ್ಸಿಡಿಯ ಡೀಸೆಲ್‌ಗೆ ಶೇ. 1.5 ರಷ್ಟು ಸೆಸ್ ವಿಽಸಿ ಆ ಹಣವನ್ನು ಮೀನುಗಾರರ ಸಂಕಷ್ಟ ಪರಿಹಾರ ನಿಧಿಗೆ ಬಳಸಿಕೊಳ್ಳಲಾಗುತ್ತದೆ. ಮೀನುಗಾರಿಕೆ ಸೊಸೈಟಿಯ ಸದಸ್ಯನಾಗಿದ್ದ ಮೀನುಗಾರ ಸಮುದ್ರದ ನಡುವೆ ಮೃತಪಟ್ಟರೆ ಆತನ ಕುಟುಂಬಕ್ಕೆ ಇದೇ ನಿಽಯಿಂದ ಪರಿಹಾರ ನೀಡಲಾಗುತ್ತದೆ. ಈ ಹಿಂದೆ ಈ ಒಬ್ಬ ಮೀನುಗಾರ ಮೃತಪಟ್ಟರೆ ಆತನ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈಗ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಆದರೆ, ಅದು ಈಗ ದುರ್ಬಳಕೆಯಾಗುತ್ತಿದೆ. ನದಿಗಳಲ್ಲಿ, ಕೆರೆಗಳಲ್ಲಿ ಮೋಜು, ಮಸ್ತಿಗಾಗಿ ತೆರಳಿ ಮೃತಪಡುವವರಿಗೂ ಈ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತಿರುವ ಮಾಹಿತಿ ನಮಗೆ ಬಂದಿದೆ. ಕೆಲವು ಶಾಸಕರ ಒತ್ತಡದಿಂದ ಅಂಥ ಪ್ರಕರಣಗಳು ನಡೆಯುತ್ತಿವೆ. ನಾವು ಸಮುದ್ರ ಮೀನುಗಾರರು ಸೆಸ್ ಕಟ್ಟಿ ಸಂಗ್ರಹಿಸಿದ ಪರಿಹಾರ ನಿಽಯನ್ನು ಬೇರೆಯವರಿಗೆ ಕೊಡುವುದಕ್ಕೆ ನಮ್ಮ ವಿರೋಧವಿದೆ.
ಇದುವರೆಗೆ ಸಮುದ್ರ ಮೀನುಗಾರಿಕೆ ಬಿಟ್ಟು ಬೇರೆ ಉದ್ಯೋಗದಲ್ಲಿ ತೊಡಗಿದ ಯಾವ ಕುಟುಂಬಗಳಿಗೆ ಪರಿಹಾರ ನಿಽ ನೀಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯಬೇಕು. ಅಲ್ಲದೇ, ಇನ್ನು ಕಟ್ಟುನಿಟ್ಟಿನ ನಿರ್ಣಯ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.
ಕಾರವಾರ ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷ ಮುರಳೀಧರ ತಾಂಡೇಲ, ಟ್ರಾಲರ್ ಬೋಟ್ ಯೂನಿಯನ್ ಅಧ್ಯಕ್ಷ ನಾಗರಾಜ ಸೋಮಾ ಹರಿಕಂತ್ರ, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮೋಹನ ದಾಜಿ ಅವರ್ಸೇಕರ್, ವಿಕ್ರಮ ತಾಂಡೇಲ, ಅಶೋಕ ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ರಾಜೇಶ ಮಾಜಾಳಿಕರ್, ರೋಹನ್ ಗಂಗಾವಳಿಕರ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net