ಸಂವಹನ ಕೌಶಲ, ಆತ್ಮವಿಶ್ವಾಸ ನಾನು ಫೆಮಿನಾ ಮಿಸ್ ಇಂಡಿಯಾದಲ್ಲಿ ಜಯಗಳಿಸಲು ದೊಡ್ಡ ಸಹಕಾರ ನೀಡಿತು. ನಾನು ಏಳು ಭಾಷೆ ಮಾತನಾಡಬಲ್ಲೆ ಎಂಬುದೂ ಮಹತ್ವದ ವಿಷಯವಾಯಿತು. ಈಗಾಗಲೇ ಉದ್ಯಮ ಕ್ಷೇತ್ರದಲ್ಲಿದ್ದು, ಮಾಡೆಲಿಂಗ್, ಫ್ಯಾಷನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿದ್ದೇನೆ. ಬಹು ಮುಖ್ಯವಾಗಿ, 2027 ರಲ್ಲಿ ಮಿಸ್ ವರ್ಲ್ಡ್ಗೆ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಬೇಕು ಎಂಬ ಇಚ್ಛೆ ಹೊಂದಿದ್ದೇನೆ ಎಂದರು.