ಶಾಸಕರ ನಡುವೆಯೇ ಒಗ್ಗಟ್ಟಿಲ್ಲ: ಸೈಲ್‌ ಅಚ್ಚರಿ ಹೇಳಿಕೆ

ಸತೀಶ ಸೈಲ್‌, ಲಕ್ಷ್ಮಣ ಸವರಿ
ಸತೀಶ ಸೈಲ್‌, ಲಕ್ಷ್ಮಣ ಸವರಿ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸೈಲ್‌ ರಿಯಾಕ್ಷನ್‌
  • ಉತ್ತರ ಕನ್ನಡದಲ್ಲಿ ಅಸಮಾಧಾನ ಕಾಣಿಸಿಲ್ಲ ಎಂದ ಸಚಿವ ಸವದಿ
ಕಾರವಾರ:

ಉತ್ತರ ಕನ್ನಡ ಜಿಲ್ಲೆಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯದೇ ಇರುವುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಶಾಸಕರು ಒಳಗೊಳಗೇ ಖುಷಿಪಡುತ್ತಿರುವಂತಿದೆ.!!

ತಮಗೆ ಅವಕಾಶ ಸಿಗದಿದ್ದರೆ ಯಾರಿಗೂ ಸಿಗಬಾರದು ಎಂಬ ಮನಸ್ಥಿತಿಯ ಪರಿಣಾಮ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದೆ ಎಂಬ ವಿಶ್ಲೇಷಣೆಗೆ ಪುಷ್ಠಿ ದೊರೆಯುತ್ತಿದೆ. ಅದನ್ನೇ ಶಾಸಕ ಸತೀಶ ಸೈಲ್ ಬಹಿರಂಗವಾಗಿ ಹೇಳಿದ್ದಾರೆ ಸಹ. ಆದರೆ, ಜಿಲ್ಲೆಯ ಬರ, ನೆರೆ ಪರಿಸ್ಥಿತಿ ಅಧ್ಯಯನಕ್ಕೆ ಬಂದ ಸಚಿವ ಲಕ್ಷ್ಮಣ ಸವದಿ ಜಿಲ್ಲೆಯ ಶಾಸಕರ ನಡುವಿನ ಅಂತರವನ್ನು ಜೋಡಿಸುವ ಯತ್ನ ನಡೆಸಿದರು.

ನಮ್ಮಲ್ಲೇ ಒಗ್ಗಟ್ಟಿಲ್ಲ:

ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ಒಗ್ಗಟ್ಟಿಲ್ಲದ ಕಾರಣ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕಾರವಾರ ಶಾಸಕ ಸತೀಶ ಸೈಲ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರೇ ಶಾಸಕರಿದ್ದರೂ ಅಲ್ಲಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ, ನಾವು ನಾಲ್ವರಿದ್ದರೂ ನಮ್ಮ ನಡುವೆಯೇ ಒಡಕಿದೆ ಎಂಬುದನ್ನು ಬಹಿರಂಗವಾಗಿ ಹೇಳಿದರು.
ಜಿಲ್ಲೆಯ ಆರ್.ವಿ.ದೇಶಪಾಂಡೆ ಅವರಿಗೆ 40 ವರ್ಷ ಸಚಿವರಾಗಲು ಅವಕಾಶ ನೀಡಲಾಗಿತ್ತು. ನಂತರ ಮಂಕಾಳ ವೈದ್ಯ ಅವರು ಸಚಿವರಾಗಿದ್ದರು. ಈ ಬಾರಿ ನೀವು ಮಾಡಿ ಎಂಬ ಮಾತು ಯಾರಿಂದಲೂ ಬಂದಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ನಾನೂ ಸಚಿವ ಆಕಾಂಕ್ಷಿಯಾಗಿದ್ದೆ. ಮೊದಲು ಮೀನುಗಾರರಿಗೆ ಪ್ರಾತಿನಿಧ್ಯ ನೀಡೋಣ ಮುಂದಿನ ಅವಽಯಲ್ಲಿ ನಿನಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅವಕಾಶ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗೆಂದು ನಾನು ಪಕ್ಷದ ನಾಯಕರು, ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಸಿಎಂ ಯಾರೇ ಇದ್ದರೂ ನಾನೇ ಸಿಎಂ ಎಂದು ಕ್ಷೇತ್ರಕ್ಕೆ ಕೆಲಸ ಮಾಡಿಸುತ್ತೇನೆ. ಸರ್ಕಾರದಲ್ಲಿ ಯಾರೇ ಸಿಎಂ ಇದ್ದರೂ ಕ್ಷೇತ್ರದ ಅಭಿವೃದ್ಧಿಯ ಕೆಲಸ ಮಾಡಿಸುವ ಶಕ್ತಿ ನನಗಿದೆ. ನಾನು `ಅಂಗೂಟಾಛಾಪ್' ಅಲ್ಲ' ಎಂದು ಮೊದಲೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ ಎಂದರು.

ಅಸಮಾಧಾನವಿಲ್ಲ:

ಈ ನಡುವೆ ಇದೇ ವಿಚಾರವಾಗಿ ಮಾತನಾಡಿದ ಸಚಿವ ಲಕ್ಷ÷್ಮಣ ಸವದಿ, ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ದೊರಕದೇ ಇರುವುದಕ್ಕೆ ಅಂಥ ಅಸಮಾಧಾನ ಯಾವುದೂ ಇಲ್ಲ ಎಂದಿದ್ದಾರೆ. ಸಚಿವ ಮಂಕಾಳ ವೈದ್ಯ ಅವರ ಹೆಸರನ್ನು ಮೊದಲು ಪಟ್ಟಿಯಲ್ಲಿ ಸೇರಿಸಿ ನಂತರ ಕೈಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ನನ್ನ ಹೆಸರೂ ಮೊದಲ ಪಟ್ಟಿಯಲ್ಲಿತ್ತು. ಆದರೆ, ನನಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ನಾನು ಸಮಾಧಾನದಿಂದ ಇದ್ದೆ. ಅವಕಾಶಗಳು ಬರುತ್ತವೆ. ಹೋಗುತ್ತವೆ ಅವನ್ನೆಲ್ಲ ಸಮನಾಗಿ ತೆಗೆದುಕೊಳ್ಳಬೇಕು. ಮಂಕಾಳ ವೈದ್ಯ ಅವರ ಜೊತೆಗೂ ಮಾತನಾಡಿದ್ದೇನೆ. ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯಬೇಕು ಎಂದು ಅವರೇ ಹೇಳಿದ್ದಾರೆ. ಅವರನ್ನೂ ದೇಶಪಾಂಡೆ ಅವರನ್ನೂ ಭೇಟಿಯಾಗಿ ಮಾತನಾಡುಲಿದ್ದೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net