ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಹಕಾರ ಸಂಘಗಳ ವ್ಯಾಜ್ಯಗಳು ನಾಲ್ಕೈದು ವರ್ಷವಾದರೂ ಬಗೆಹರಿಯದೇ ಗ್ರಾಹಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಜಂಟಿ ರಿಜಿಸ್ಟ್ರಾರ್ ಮಟ್ಟದ ಒಬ್ಬ ಅಧಿಕಾರಿ ಎಲ್ಲ ಪ್ರಕರಣಗಳ ವಿಚಾರಣೆ ಮಾಡಬೇಕಿರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುತ್ತದೆ. ಅದನ್ನು ನಿವಾರಿಸಲು ಡಿ-ಸೆಂಟ್ರಲೈಜೇಶನ್ ಮಾಡಿ ಪ್ರತಿ ಕಂದಾಯ ಉಪವಿಭಾಗಕ್ಕೆ ಒಬ್ಬ ಅನುಭವಿ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.