ನಿಯಂತ್ರಣ ತಪ್ಪಿ ದರೆಗೆ ಗುದ್ದಿದ ಮಿನಿ ಬಸ್ loses control

ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ದರೆಗೆ ಗುದ್ದಿದ ಮಿನಿಬಸ್.
ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ದರೆಗೆ ಗುದ್ದಿದ ಮಿನಿಬಸ್.
Published on
ಯಲ್ಲಾಪುರ: ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ದರೆಗೆ ಗುದ್ದಿ, 19 ಜನ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ತಾಲೂಕಿನ ಅರಬೈಲ್ ಘಟ್ಟದ ಶಿರಲೆ ಕ್ರಾಸ್ ಬಳಿ ಸಂಭವಿಸಿದೆ.
ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅರಬೈಲಿನ ಸುಷ್ಮಾ ಪರಮಾನಂದ ನಾಯ್ಕ, ರೇಷ್ಮಾ ರಾಜೇಶ ನಾಯ್ಕ, ನೇಹಾಲ ಶಾಂತಾ ನಾಯ್ಕ, ಅಖಿಲ ತುಳಸಿದಾಸ ಸಾವಂತ, ಸಂಧ್ಯಾ ಶಾಂತಾ ನಾಯ್ಕ, ಪುನೀತ ಶಿವಾನಂದ ನಾಯ್ಕ, ಸಮರ್ಥ ರಾಜೇಶ ನಾಯ್ಕ, ಶಿವರಾಮ ನಾರಾಯಣ ನಾಯ್ಕ, ಪ್ರಕಾಶ ವಿಶ್ವನಾಥ ನಾಯ್ಕ, ಕರ್ಣ ತುಳಸಿದಾಸ ಸಾವಂತ, ನಮನ ಪ್ರೇಮಾನಂದ ನಾಯ್ಕ, ರೀನಾ ಪ್ರಕಾಶ ನಾಯ್ಕ, ಪ್ರಮೀಳಾ ಪ್ರಭಾಕರ ನಾಯ್ಕ, ರೇಖಾ ಮುರಳೀಧರ ನಾಯ್ಕ, ಶಾರದಾ ಕಾಶೀನಾಥ ಸಾವಂತ, ವೈಭವಿ ಪ್ರಮೋದ ನಾಯ್ಕ, ಸಂಗೀತಾ ಪ್ರಮೋದ ನಾಯ್ಕ, ನವೀನ ಶಾಂತಾ ನಾಯ್ಕ, ಕೃಷ್ಣ ನಾರಾಯಣ ನಾಯ್ಕ ಗಾಯಗೊಂಡವರು.
ಬೆಳಗಾವಿಯಿಂದ ಮದುವೆ ಮುಗಿಸಿ ಮರಳುತ್ತಿದ್ದ ವೇಳೆ ಅರಬೈಲ್ ಘಟ್ಟದಲ್ಲಿ ಅಪಘಾತ ಸಂಭವಿಸಿದ್ದು, ಬಸ್‌ನ ಮುಂಭಾಗ ಜಖಂಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಚಾಲಕ ಬಾಸಲದ ಸಂದೀಪ ತಳೆಕರ್ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net