ಕರ್ನಾಟಕದ ಕರಾವಳಿಯ ಸಂಪನ್ಮೂಲಗಳನ್ನು ಸಮಗ್ರವಾಗಿ ಬಳಸಿಕೊಳ್ಳುವ ಸಲುವಾಗಿ, ಕರ್ನಾಟಕ ಮೆರಿಟೈಮ್ ಬಿಲ್-2015 ರಚಿಸಲಾಯಿತು. 2017 ರ ಆಗಸ್ಟ್ 23 ರಂದು ಅದು ಸರ್ಕಾರಿ ಗೆಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟವಾಯಿತು. 2018 ರಲ್ಲಿ ಮಂಡಳಿ ಕಾರ್ಯ ನಿರ್ವಹಣೆಯನ್ನು ಪ್ರಾರಂಭಿಸಿತು. ಸಿಎಂ ಈ ಮಂಡಳಿಯ ಅಧ್ಯಕ್ಷರಾಗಿದ್ದು, ಬಂದರು ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಐಎಎಸ್ ಗ್ರೇಡ್‌ನ ಒಬ್ಬ ಅಧಿಕಾರಿ ಸಿಇಒ ಆಗಿರುತ್ತಾರೆ. ಪ್ರಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯ ಬಳಸಿಕೊಂಡು ಅಭಿವೃದ್ಧಿಯಾಗಿ, ನಂತರ ಸ್ವಂತ ಸೃಷ್ಟಿಸಿಕೊಂಡು ಮುನ್ನಡೆಯುವ ಯೋಜನೆ ಕರ್ನಾಟಕ ಜಲಸಾರಿಗೆ ಮಂಡಳಿ(ಕೆಎಂಬಿ)ಯದ್ದಾಗಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರೀಕ್ಷೆಯ ಆದಾಯ ದೊರಕಿಲ್ಲ. ಸ್ವಂತ ಆದಾಯ ಸೃಜನೆ ಮಾಡುವ ಸಾಕಷ್ಟು ಅವಕಾಶವಿದ್ದರೂ ಅದಕ್ಕೆ ತೊಡಕುಗಳೂ ಸಾಕಷ್ಟಿವೆ.