ಕ್ರೀಡಾಕೂಟಗಳಿಂದ ಮಾನಸಿಕ ನೆಮ್ಮದಿ sports events

ಸಿದ್ದಾಪುರ ತಾಲೂಕಿನ ಕಡಕೇರಿಯಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ (sports Events) ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮಾತನಾಡಿದರು.
ಸಿದ್ದಾಪುರ ತಾಲೂಕಿನ ಕಡಕೇರಿಯಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ (sports Events) ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮಾತನಾಡಿದರು.
Published on
ಸಿದ್ದಾಪುರ: ದೈನಂದಿನ ಕೆಲಸದ ಒತ್ತಡದ ಬದುಕಿನಲ್ಲಿ ಕ್ರೀಡಾಕೂಟಗಳು (Sports Events) ಮಾನಸಿಕ ನೆಮ್ಮದಿ ಮತ್ತು ಖುಷಿ ನೀಡುತ್ತವೆ.
ಮೈದಾನದಲ್ಲಿ ಎಲ್ಲ ಸಮಸ್ಯೆಗಳನ್ನು ಮರೆತು ಒಂದೇ ತಂಡವಾಗಿ ಆಡುವಾಗ ಸಿಗುವ ಮನೋಲ್ಲಾಸ ಹಿರಿದು. ಸೋಲನ್ನೇ ಸವಾಲಾಗಿ ಸ್ವೀಕರಿಸಿ ಗೆಲುವನ್ನು ಕಂಡುಕೊಳ್ಳುವ ಛಲ ನಮ್ಮದಾಗಬೇಕು ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಂಘದ ವತಿಯಿಂದ ತಾಲೂಕಿನ ಕಡಕೇರಿ ಹಾಗೂ ಕಾನಳ್ಳಿ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 6ನೇ ವರ್ಷದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಮಾತನಾಡಿ, ಇಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಉತ್ತಮ ಸಂಬಂಧ ಮತ್ತು ಬೆಳವಣಿಗೆಗೆ ನೆರವಾಗುತ್ತಿದೆ.
ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಮತ್ತು ಆಡಳಿತ ಯಂತ್ರದ ಅಧಿಕಾರಿಗಳು ಹೊಂದಾಣಿಕೆ ಇಟ್ಟುಕೊಂಡು ಹೋಗಲು ಈ ವೇದಿಕೆ ಸಹಕಾರಿ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿದರು.
ಹಿರಿಯರಾದ ಪರಮೇಶ್ವರಯ್ಯ ಕಾನಳ್ಳಿಮಠ, ಪಿಡಿಒ ಸುಬ್ರಹ್ಮಣ್ಯ ಹೆಗಡೆ, ಅರಣ್ಯ ಇಲಾಖೆಯ ಮಂಜುನಾಥ, ಆಧಾರ ಸಂಸ್ಥೆಯ ನಾಗರಾಜ ಮಾಳ್ಕೋಡ, ಎಂ.ಜಿ. ನಾಯ್ಕ, ಸಂಜಯ, ಅರಣಕುಮಾರ, ಕನ್ನೇಶ ಕೋಲಸಿರ್ಸಿ ಇತರರಿದ್ದರು.
ತಾಲೂಕು ಪತ್ರರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ ಹಾಗೂ ಸದಸ್ಯ ಸುರೇಶ ಕಡಕೇರಿ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net