Religion ಸನಾತನ ಧರ್ಮದ ಅನುಸಾರ ಜೀವನ ಇರಲಿ

ಶಿರಸಿ ತಾಲೂಕು ಬಂಡಲದಲ್ಲಿ ಆಯೋಜಿಸಿದ್ದ ಹಿಂದು ಧರ್ಮ Religion ಸಮ್ಮೇಳನದಲ್ಲಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು.
ಶಿರಸಿ ತಾಲೂಕು ಬಂಡಲದಲ್ಲಿ ಆಯೋಜಿಸಿದ್ದ ಹಿಂದು ಧರ್ಮ Religion ಸಮ್ಮೇಳನದಲ್ಲಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು.
Published on
ಶಿರಸಿ: ನಾವು ಸಂಸ್ಕಾರದ ಬದುಕಿನಿಂದ ದೂರ ಆದರೆ ಅದರ ಪರಿಣಾಮ ನಮ್ಮ ಮುಂದಿನ ತಲೆಮಾರಿಗೂ ಆಗುತ್ತದೆ. ಸನಾತನ ಧರ್ಮದ Religion ಅನುಸಾರ ನಾವು ಜೀವನ ಪದ್ಧತಿ ಕಂಡುಕೊಳ್ಳಬೇಕು ಎಂದು ಮಿರ್ಜಾನಿನ ಆದಿಚುಂಚನಿಗಿರಿ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಂಡಲದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದು ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸನಾತನ ಸಂಸ್ಕೃತಿಯಲ್ಲಿ ವಿವಾಹ ಎಂದರೆ ಮನಸುಗಳ ಕೂಡುವಿಕೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವಿವಾಹದ ಅರ್ಥವೇ ಬೇರೆ. ನಾವು ಪಾಶ್ಚಿಮಾತ್ಯ ಪದ್ಧತಿಯ ವಿವಾಹ ಅಳವಡಿಸಿಕೊಳ್ಳುವುದರಿಂದ ಬದುಕು ಬರಡಾಗುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ದೇವರ ಪಾದಕ್ಕೆ ಅದನ್ನೆಲ್ಲ ಅರ್ಪಣೆ ಮಾಡಿ ಮಾರನೇ ದಿನ ಎಲ್ಲ ಮರೆಯುವ ಸಂಪ್ರದಾಯ ನಮ್ಮದು.
ಈಗ ಕಾಲ ಬದಲಾಗಿದೆ. ಇಂದು ಮನೆಯ ದ್ವೇಷ, ವಿರೋಧಗಳನ್ನು ಅಕ್ಕ ಪಕ್ಕದ ಮನೆಯವರಿಗೆ ಮೊದಲು ಹೇಳುವ ಸಂಪ್ರದಾಯ ಬಂದಿದೆ. ಇದರಿಂದಾಗಿ ಗಂಡ ಹೆಂಡತಿ ನಡುವೆ ಇನ್ನಷ್ಟು ಅಂತರವಾಗಿ ವಿಚ್ಛೇದನಕ್ಕೆ ದಾರಿ ಆಗುತ್ತದೆ. ನಮ್ಮ ನೋವು ನಲಿವನ್ನು ಭಗವಂತನ ಪಾದಕ್ಕೆ ಸಲ್ಲಿಸಿದರೆ ಎಲ್ಲ ಕಷ್ಟಗಳೂ ದೂರ ಆಗುತ್ತವೆ ಎಂದರು.
ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ಸಂಸ್ಕಾರ ನೀಡುವಿಕೆಯಲ್ಲಿ ತಾಯಂದಿರ ಪಾತ್ರ ಅತಿ ಮುಖ್ಯವಾಗುತ್ತದೆ. ಮಕ್ಕಳು ಅಪ್ಪ ಅಮ್ಮ ಏನು ಮಾಡುತ್ತಾರೆ ಅದನ್ನು ನೋಡಿ ಕಲಿಯುತ್ತಾರೆ. ಮಕ್ಕಳು ಎಂದಿಗೂ ಹೇಳಿದ್ದನ್ನು ಅನುಸರಿಸುವ ಬದಲು ನೋಡಿದ್ದನ್ನು ಅನುಸರಿಸುವುದು ಜಾಸ್ತಿ. ಮಕ್ಕಳ ಮುಂದೆ ಪಾಲಕರು ಶ್ರದ್ಧೆಯಿಂದ ಬದುಕಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯನಿರ್ವಾಹ ಶ್ರೀಕಾಂತ ಅಗಸಾಲ ಮಾತನಾಡಿ, ತಾನೊಬ್ಬನೇ ಅಲ್ಲ, ಸಮಸ್ತ ಸಮುಷ್ಠಿ ಸುಖದಿಂದ ಬದುಕಲಿ ಎಂದು ಆಶಿಸುವವನು ಹಿಂದು. ನಮ್ಮ ಪೂರ್ವಜರು ಜಗತ್ತಿಗೇ ಒಳ್ಳೆಯದಾಗಲಿ ಎಂದು ಆಶಿಸುತ್ತಿದ್ದರು.
ಪ್ರತಿ ಜೀವಿಯಲ್ಲೂ ದೇವರನ್ನು ಕಾಣುವ ಸಂಪ್ರದಾಯ ನಮ್ಮದು. ಆದರೆ, ಹಿಂದುಗಳನ್ನು ಒಡೆದು ಆಳುವ ನೀತಿ ಹಿಂದಿನಿಂದಲೂ ಬಂದಿದೆ. ಹಿಂದುಗಳ ಆಚರಣೆ ದೇಶದಲ್ಲಿ ಭಿನ್ನತೆ ಇರಬಹುದು. ಆದರೆ, ನಮ್ಮೆಲ್ಲರ ನಂಬಿಕೆ ಒಂದೇ. ನಮ್ಮ ಪೂರ್ವಜರು ಜಗತ್ತಿಗೆ ನೀಡಿದ ಕೊಡುಗೆ ಸದಾ ಕಾಲ ನೆನಪಿಡುವಂತದ್ದು ಎಂದರು.
ಇದೇ ವೇಳೆ ನಾಟಿ ವೈದ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ಲಕ್ಷ್ಮೀಗೌಡ ಕಳಕಾರ, ಹೇಮಾವತಿ ಗೌಡ ಬಡಗಿ, ಪಾರ್ವತಿ ಮರಾಠೆ, ಗಂಗಾ ಸೀತಾರಾಮ ಹೆಗಡೆ, ರಾಘವೇಂದ್ರ ಕೊಡಿಯಾ ಇತರರನ್ನು ಸನ್ಮಾನಿಸಲಾಯಿತು.
ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಶ್ರೀ ಕ್ಷೇತ್ರ ಮಂಜುಗುಣಿಯ ಪ್ರಧಾನ ಅರ್ಚಕ ಶ್ರೀನಿವಾಸ ಭ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಭವ್ಯಾ ಮರಾಠಿ, ಬಂಡಲ ಗ್ರಾ ಪಂ ಅಧ್ಯಕ್ಷ ದೇವರಾಜ ಮರಾಠಿ, ಮಂಜುನಾಥ ಮರಾಠಿ ಹೊಸ್ಕೆರೆ, ಇತರರಿದ್ದರು. ಸಂಚಾಲಕ ಸಂತೋಷ ಗೌಡರ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net