ಸಿದ್ದಾಪುರ: ತಾಲೂಕು ಕಸಾಪ ವತಿಯಿಂದ ಸಾಧಕರ ಮನೆಗೆ ಸಾಹಿತ್ಯ ಪರಿಷತ್ ಕಾರ್ಯಕ್ರಮದಡಿಯಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಖ್ಯಾತ ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಅವರನ್ನು ಶನಿವಾರ ಅಭಿನಂದಿಸಿ ಗೌರವಿಸಲಾಯಿತು.
ಕೆ.ಪಿ.ಹೆಗಡೆ ಗೌರವವನ್ನು ಸ್ವೀಕರಿಸಿ ಮಾತನಾಡಿ, ನಾನೋಬ್ಬ ಯಕ್ಷಗಾನ ಭಾಗವತನಾಗಲು ಹೊಸ್ತೋಟ ಮಂಜುನಾಥ ಭಾಗವತ ಹಾಗೂ ನಾರಾಯಣ ಭಾಗವತ ಉಪ್ಪೂರು ಅವರು ಕಾರಣಿಕರ್ತರು. ನನ್ನ ಹತ್ತಿರ ಸಾವಿರಾರು ವಿದ್ಯಾರ್ಥಿಗಳು ಅಧ್ಯಯಯನ ಮಾಡಿ ಬೇರೆ ಬೇರೆ ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಉದ್ಯೋಗದಲ್ಲಿಯೂ ಇದ್ದಾರೆ. ರಾಜ್ಯ ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಸಂತಸ ತಂದಿದೆ. ಯಕ್ಷಗಾನ ಇನ್ನೂ ಬೆಳೆಯಬೇಕು ಹಾಗೂ ಉಳಿಯಬೇಕು. ಇದಕ್ಕೆ ಎಲ್ಲರ ಸಹಕಾರ ಅವಶ್ಯ ಎಂದರು.